ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಅಧಿಕಾರಾವಧಿ ಮುಕ್ತಾಯಗೊಂಡಂತ ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಿತ್ತು. ಈ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಡಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, ಸಂವಿಧಾನದ ಅನುಚ್ಛೇಧ 243-E ಉಪಬಂಧದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಹಾಗೂ 42 ರಲ್ಲಿ ಉಪಬಂಧಿಸಿರುವಂತೆ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ, ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ಅವಧಿಯು, ಅವುಗಳ ಮೊದಲ ಸಭೆಗಾಗಿ ಗೊತ್ತುಪಡಿಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಸ್ತಿತ್ವದಲ್ಲಿದ್ದು, 5 ವರ್ಷಗಳು ಮುಗಿದ ನಂತರದ ದಿನಾಂಕದಿಂದ ಗ್ರಾಮ ಪಂಚಾಯಿತಿಯ ಅವಧಿಯು ಮುಕ್ತಾಯಗೊಳ್ಳಲಿದ್ದು ಹಾಗೂ 2020-2025 ನೇ ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿಯು 2026 ನೇ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಮುಂದಿನ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳುವುದರಿಂದ, ಗ್ರಾಮ ಪಂಚಾಯಿತಿಗಳು ಮುಕ್ತಾಯಗೊಳ್ಳಲಿರುವ ದಿನಾಂಕದ ಮುಂದಿನ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಸೂಚಿಸುವಂತೆ ನಿರ್ದೇಶಿಸಲಾಗಿರುತ್ತದೆ ಎಂದಿದ್ದಾರೆ.
ಪ್ರಯುಕ್ತ, ಸದರಿ 2026-2031 ರ ಅವಧಿಗಾಗಿ ಚುನಾವಣೆ ನಡೆದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಅಥವಾ ಮುಂದಿನ ಆದೇಶದವರೆಗೆ ಸಾಗರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಪ್ರಭುಲಿಂಗ ಕವಳಿಕಟ್ಟಿ ಭಾ.ಅ.ಸೇ, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನಾನು ಈ ಕೆಳಕಂಡ ಅಧಿಕಾರಿಗಳನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ (8) ರನ್ವಯ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಿದ್ದಾರೆ.
ಹೀಗಿದೆ ಸಾಗರ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳ ಪಟ್ಟಿ
- ಮಾಲ್ವೆ – ಅವಿನಾಶ್.ಎಂ, ಸಹಾಯಕ ತೋಟಗಾರಿಕಾ ಅಧಿಕಾರಿ, ಸಾಗರ
- ನಾಡಕಲಸಿ- ಶಿವಪ್ರಕಾಶ್ ಬಿ.ಎಲ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸಾಗರ
- ಉಳ್ಳೂರು- ಮಹಭಲೇಶ್ವರ್, ಸಹಾಯಕ ತೋಟಗಾರಿಕಾ ನಿರ್ದೇಶಕರು, ಸಾಗರ
- ಪಡವಗೋಡು- ಪೂರ್ಣಿಮಾ ಆರ್.ಎಂ, ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯ್ತಿ, ಸಾಗರ
- ಕೆಳದಿ- ರಜಿಯಾ, ಕಿರಿಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಗರ
- ಮಾಸೂರು- ದಿವ್ಯಶ್ರೀ ಯು.ಬಿ, ತಾಲ್ಲೂಕು ಯೋಜನಾಧಿಕಾರಿಗಳು, ತಾ.ಪಂ, ಸಾಗರ
- ಬರೂರು- ರಾಜೇಶ್ವರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಸಾಗರ
- ಭೀಮನೇರಿ- ಪ್ರಶಾಂತ್ ವರ್ಡೇಕರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಸಾಗರ
- ಹಿರೇಬಿಲಗುಂಜಿ- ಪ್ರಶಾಂತ್ ವರ್ಡೇಕರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಸಾಗರ.
- ಗೌತಮಪುರ- ಶಿವರಾಜ್, ಸಹಾಯಕ ತೋಟಗಾರಿಕೆ ಅಧಿಕಾರಿ, ಸಾಗರ
- ಹೊಸೂರು- ಮಂಜಪ್ಪ, ಶಿಶು ಅಭಿವೃದ್ಧಿ ಅಧಿಕಾರಿ, ಸಾಗರ
- ಆಚಾಪುರ- ಮಹಾಬಲೇಶ್ವರ್, ಸಹಾಯಕ ತೋಟಗಾರಿಕಾ ಅಧಿಕಾರಿ, ಸಾಗರ
- ಆನಂದಪುರ- ಶಿವಪ್ರಕಾಶ್ ಬಿಎಲ್, ಇಓ, ತಾಲ್ಲೂಕು ಪಂಚಾಯ್ತಿ, ಸಾಗರ
- ತ್ಯಾಗರ್ತಿ- ಮಹಮ್ಮದ್ ಹನೀಫ್, ಸಹಾಯಕ ನಿರ್ದೇಶಕರು, ತಾ.ಪಂ, ಸಾಗರ
- ಯಡೇಹಳ್ಳಿ- ಸುರೇಶ್ ಸಹನೆ, ಸಹಾಯಕ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ಸಾಗರ
- ಹೆಗ್ಗೋಡು- ಗುರುಕೃಷ್ಣ ಶೆಣೈ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಗರ
- ಭೀಮನಕೋಣೆ- ಅನ್ನಪೂರ್ಣ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಾಗರ
- ಆವಿನಹಳ್ಳಿ- ಶ್ರೀದೇವಿ, ಸಹಾಯಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಗರ
- ಕೋಳೂರು- ರಿಜ್ವಾನ್ ಎರೆಸೀಮೆ, ಕೃಷಿ ಅಧಿಕಾರಿ, ಕೃಷಿ ಇಲಾಖೆ, ಸಾಗರ
- ಯಡಜಿಗಳೇಮನೆ- ಗುರುಕೃಷ್ಣ ಶೈಣೈ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಗರ
- ಕಲ್ಮನೆ- ಎನ್ ಮಂಜುನಾಥ್, ಸಹಾಯಕ ನಿರ್ದೇಶಕರು, ಪಶುಪಾಲನೆ ಇಲಾಖೆ, ಸಾಗರ
- ಚನ್ನಗೊಂಡ- ಮೌನೇಶ್ ಬಡಿಗೇರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್, ಸಾಗರ
- ಕುದೂರು- ಭೀಮ್ ಶಿ ಕರೆಗಾಂವಿ, ಸಹಾಯಕ ತೋಟಗಾರಿಕೆ ಅಧಿಕಾರಿ, ಸಾಗರ
- ಎಸ್ ಎಸ್ ಭೋಗ್- ಕೆ.ಡಿ ಭರತ್, ಸಹಾಯಕ ಅಭಿಯಂತರರು, ಪಂ.ರಾಜ್ ಇಲಾಖೆ, ಸಾಗರ
- ತುಮರಿ- ಭೂಮೇಶ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಸಾಗರ
- ಅರಳಗೋಡು, ಶಂಕರ್ ಪ್ರಸಾದ್, ಸಹಾಯಕ ತೋಟಗಾರಿಕಾ ಅಧಿಕಾರಿ, ಸಾಗರ
- ಭಾನುಕುಳಿ- ನವೀನ್ ಕುಮಾರ್, ಆರ್.ಎಫ್ ಓ ವೈಲ್ಡ್ ಲೈಫ್, ಕಾರ್ಗಲ್
- ತಾಳಗುಪ್ಪ- ಮಹಮದ್ ಹನೀಫ್, ಸಹಾಯಕ ನಿರ್ದೇಶಕರು, ಪಂ.ರಾಜ್ ಇಲಾಖೆ, ಸಾಗರ
- ಕಾನ್ಲೆ- ಶಿಲ್ಪಾ, ಕಾರ್ಮಿಕ ನಿರೀಕ್ಷಕರು, ಸಾಗರ
- ಸೈದೂರು-ಬೆನಕೇಶ್, ಪಂ.ರಾಜ್ ಇಂಜಿನಿಯರಿಂಗ್ ಇಲಾಖೆ, ಸಾಗರ
- ಮರ್ತೂರು- ಹೂವಣ್ಣ, ಕೃಷಿ ಅಧಿಕಾರಿ, ಕೃಷಿ ಇಲಾಖೆ, ಸಾಗರ
- ಖಂಡಿಕಾ- ಸದಾನಂದ ಸ್ವಾಮಿ.ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾಗರ
- ಹಿರೇನೆಲ್ಲೂರು- ಸುರೇಶ್ ಸಹನೆ, ಸಹಾಯ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ಸಾಗರ
- ಶಿರವಂತೆ- ಪೂರ್ಣಿಮ ಆರ್.ಎಂ, ಸಹಾಯಕ ನಿರ್ದೇಶಕರು, ತಾ.ಪಂ, ಸಾಗರ
- ತಲವಾಟ- ಮಂಜಪ್ಪ, ಶಿಶು ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾಗರ
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು









