ಶಿವಮೊಗ್ಗ : ಜಿಲ್ಲೆಯ ಸಾಗರದ ಸುಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ಮೂರನೇ ದಿನವಾಗಿದ್ದು, ಶ್ರೀ ಮಾರಿಕಾಂಬೆ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಪಾನಕವನ್ನು ವಿತರಣೆ ಮಾಡಲಾಗುತ್ತಿದೆ ಎಂಬುದಾಗಿ ಸಂಚಾಲಕ ಎಂ.ಡಿ.ಆನಂದ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬೆ ದರ್ಶನಕ್ಕೆ ಆಗಮಿಸಿದ್ದಂತ ಭಕ್ತರಿಗೆ ಪಾನಕ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ಬಾರಿ ಮಾರಿಕಾಂಬಾ ದೇವಿ ದರ್ಶನಕ್ಕೆ ಅತಿಹೆಚ್ಚು ಭಕ್ತರು ಆಗಮಿಸಿದ್ದಾರೆ. ಶುಕ್ರವಾರ ಮತ್ತು ಭಾನುವಾರ ಅತಿಹೆಚ್ಚಿನ ಭಕ್ತರು ಪಾಲ್ಗೊಳ್ಳುತ್ತಾರೆ. ಬಿಸಿಲಿನ ಬೇಗೆಯಿಂದ ಭಕ್ತರು ಬಳಲ ಬಾರದು ಎಂದು ಪಾನಕ ವ್ಯವಸ್ಥೆ ಮಾಡಿದೆ. ಈ ವರ್ಷ ಅಮ್ಮನವರ ದರ್ಶನಕ್ಕೆ ಸಣ್ಣಪುಟ್ಟ ಸಮಸ್ಯೆ ಆಗಿರುವುದು ಕಂಡು ಬಂದಿದೆ. ಮುಂದಿನ ಬಾರಿ ನಮ್ಮ ಸಮಿತಿ ಆಡಳಿತಕ್ಕೆ ಬಂದರೆ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಿತಿಯ ಪ್ರಮುಖರಾದ ಶ್ರೀನಿವಾಸ್ ಮೇಸ್ತ್ರೀ ಮಾತನಾಡಿ, ಮಾರಿಕಾಂಬಾ ದೇವಿ ಜಾತ್ರೆಯು ನಾಲ್ಕನೇ ದಿನ ಅತ್ಯಂತ ವಿಜೃಂಭಣೆಯಿಂದ ಜನಸ್ತೋಮದ ನಡುವೆ ನಡೆಯುತ್ತಿದೆ. ಭಕ್ತರು ಸಹಸ್ರ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಿದ್ದಾರೆ. ಸಮಿತಿ ನ್ಯಾಸ ಪ್ರತಿಷ್ಟಾನ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ತಂಪು ಪಾನೀಯ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಜನರು ಬಿಸಿನಲಿನಲ್ಲಿ ಬವಣೆ ಪಡುತ್ತಿರುವುದನ್ನು ನೋಡಿ ಹಿತರಕ್ಷಣಾ ಸಮಿತಿ ಪಾನಕ ವ್ಯವಸ್ಥೆ ಮಾಡಿದೆ. ಜೊತೆಗೆ ಬಿದ್ದ ಕಸವನ್ನು ಸಂಗ್ರಹಿಸುವ ಕೆಲಸ ಸಹ ಗಮನ ಹರಿಸಿದೆ ಎಂದರು.
ಈ ವೇಳೆ ಸಮಿತಿಯ ಟಿ.ರಾಮಣ್ಣ, ವಿ.ಶಂಕರ್, ಮಾ.ಸ.ನಂಜುಂಡಸ್ವಾಮಿ, ಜಿ.ಕೆ.ಭೈರಪ್ಪ, ಎನ್.ಶ್ರೀನಾಥ್, ಟೀಪುರಿ ಮಂಜುನಾಥ್, ರಮೇಶ್ ಚಂದ್ರಗುತ್ತಿ, ಸದಾನಂದ, ಗುರುಬಸವನ ಗೌಡ, ಸತೀಶ್, ನಿತ್ಯಾನಂದ ಶೆಟ್ಟಿ, ನಾಗರಾಜ್, ಪ್ರಜ್ವಲ್, ದರ್ಶನ್, ಗೌರೀಶ್, ರಾಜು, ಮಧು ಪ್ರಭಾಕರ್, ಜನಾರ್ಧನ ಆಚಾರಿ, ಡಿಶ್ ಗೋಪಾಲ, ಶ್ರೀಧರ್ ಭಟ್ ಇನ್ನಿತರರು ಹಾಜರಿದ್ದರು.
ಸಾಗರದ ಮಾರಿ ಜಾತ್ರೆ ಪ್ರಯುಕ್ತ ‘ಹೆಲಿ ಟೂರಿಸಂ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ
ಅಪ್ರಾಪ್ತ ವಯಸ್ಕಳ 30 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರಿಂ ಕೋರ್ಟ್








