ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲೇ ಈಗ ಮರಣ ನೋಂದಣಿಗೆ ಅವಕಾಶ ನೀಡಲಾಗಿದೆ. ಜನನ-ಮರಣ ನೋಂದಣಿಗೆ ಅವಕಾಶ ನೀಡಲಾಗಿದ್ದು, ಅಲ್ಲಿಯೇ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ.
ಜನನ, ಮರಣ ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿದ್ದೀರಾ? ಇನ್ನೀಗ ಆ ಚಿಂತೆ ಬೇಡ. ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ bsk.karnataka.gov.in ನಲ್ಲಿ ಅರ್ಜಿ ಸಲ್ಲಿಸಿ ಜನನ,ಮರಣ ಪ್ರಮಾಣ ಪತ್ರ ಪಡೆಯಿರಿ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ನಿಮ್ಮ ಗ್ರಾಮ ಪಂಚಾಯ್ತಿಯಲ್ಲೇ ಈಗ ಮರಣ ನೋಂದಣಿ ಸಾಧ್ಯವಿದೆ. ಮೊದಲ ಪ್ರಮಾಣ ಪತ್ರ ಉಚಿತವಾಗಿರುತ್ತದೆ ಎಂದಿದೆ.
ನಿಮಗಿದು ತಿಳಿದಿರಲಿ
ಜನನ, ಮರಣ, ನಿರ್ಜೀವ ಜನನಗಳನ್ನು ನಿಮ್ಮ ಗ್ರಾಮ ಪಂಚಾಯ್ತಿಯಲ್ಲೇ ನೋಂದಣಿ ಮಾಡಿಸಿ, ಮೊದಲ ಪ್ರಮಾಣ ಪತ್ರವನ್ನು ಇಚಿತವಾಗಿ ಪಡೆಯಬಹುದಾಗಿದೆ. ಈ ಮೂಲಕ ಪ್ರತಿಯೊಂದು ಜನನ, ಮರಣ ನೋಂದಣಿಯನ್ನು ಖಚಿತಪಡಿಸಿಕೊಳ್ಳಿ ಅಂತ ತಿಳಿಸಿದೆ.
ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
ಪಡಿತರ ಚೀಟಿ
ವಾಹನ ಚಾಲನಾ ಪರವಾನಗಿ
ಚುನಾವಣಾ ಗುರುತಿನ ಚೀಟಿ
ಪಾಸ್ ಪೋರ್ಟ್
ಜನನ ಪ್ರಮಾಣ ಪತ್ರ
SSLC, PUC ಅಂಕಪಟ್ಟಿ
ವಿದ್ಯಾರ್ಥಿ ಗುರುತಿನ ಚೀಟಿ








