Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆಯಿಂದ ಸಾಗರದಲ್ಲಿ ‘ಹೆಲಿ ಟೂರಿಸಂ’ ಆರಂಭ: ಎಲ್ಲೆಲ್ಲಿಗೆ? ಎಷ್ಟು ‘ದರ ಫಿಕ್ಸ್’ ಗೊತ್ತಾ?
KARNATAKA

ನಾಳೆಯಿಂದ ಸಾಗರದಲ್ಲಿ ‘ಹೆಲಿ ಟೂರಿಸಂ’ ಆರಂಭ: ಎಲ್ಲೆಲ್ಲಿಗೆ? ಎಷ್ಟು ‘ದರ ಫಿಕ್ಸ್’ ಗೊತ್ತಾ?

By kannadanewsnow0905/02/2026 12:30 PM

ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಹೆಲಿಕಾಪ್ಟರ್ ಹಾರಾಟ ಆರಂಭಗೊಳ್ಳಲಿದೆ. ಎಲ್ಲೆಲ್ಲಿಗೆ? ಎಷ್ಟು ದರ ಎನ್ನುವ ಮಾಹಿತಿಯನ್ನು ಆಯೋಜಕರಾದಂತ ಕಿರಣ್ ದೊಡ್ಮನಿ ನೀಡಿದ್ದಾರೆ ಮುಂದೆ ಓದಿ..

ಇಂದು ಈ ಬಗ್ಗೆ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕಿರಣ್ ದೊಡ್ಮನೆ ಅವರು, ಇದೇ ಮೊದಲ ಬಾರಿಗೆ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೆಲಿ ಟೂರಿಸಂಗೆ ಗೋಪಾಲಗೌಡ ಕ್ರೀಢಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಆ ಬಳಿಕೆ ಮೊದಲು ಬುಕ್ ಮಾಡಿದವರಿಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ ಎಂದರು.

ಈಗಾಗಲೇ ಹೆಲಿಕಾಪ್ಟರ್ ಮೂಲಕ ಹಾರಾಟಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಡೆಯವರು, ಕಾರವಾರದ ರಾಜಕಾರಣಿಯೊಬ್ಬರು, ಸ್ವಾಮೀಜಿಗಳು ಸೇರಿದಂತೆ ಹಲವರು ಬುಕ್ಕಿಂಗ್ ಮಾಡಿದ್ದಾರೆ. ಅವರೆಲ್ಲರಿಗೂ ಹೆಲಿ ಟೂರಿಸಂ ಸಂಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾಗರದ ಮಾರಿಕಾಂಬ ಜಾತ್ರಾ ಮಹೋತ್ಸದ ಪ್ರಯುಕ್ತ ಆಯೋಜಿಸಿರುವಂತ ಹೆಲಿ ಟೂರಿಸಂಗೆ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕವಾದಂತ ಧನ್ಯವಾದಗಳನ್ನು ತಿಳಿಸುವೆ. ಶಾಸಕ ಗೋಪಾಲಕೃಷ್ಣ ಅವರು ವಿಶೇಷ ಕಾಳಜಿ ವಹಿಸಿ ಹೆಲಿ ಟೂರಿಸಂಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಅವರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.

ಹೆಲಿ ಟೂರುಸಂ ಎಲ್ಲೆಲ್ಲಿಗೆ? ದರ ಎಷ್ಟು ನಿಗದಿ?

ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕಿರಣ್ ದೊಡ್ಮನೆ ಅವರು, ಸಾಗರ ಒಂದು ರೌಂಡ್ ಗೆ ಒಬ್ಬರಿಗೆ ರೂ.4,000 ದರ ನಿಗದಿ ಮಾಡಲಾಗಿದೆ. ಜೋಗದ ಜಲಪಾತವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಲು 6 ಜನರಿಗೆ ರೂ.45,000 ದರ ನಿಗದಿ ಪಡಿಸಲಾಗಿದೆ. ಸಿಗಂದೂರು ಸೇತುವೆ ವೀಕ್ಷಣೆಗೆ 6 ಮಂದಿಗೆ ರೂ.45,000 ರೇಟ್ ಫಿಕ್ಸ್ ಮಾಡಲಾಗಿದೆ. ಸಿಗಂದೂರು ಸೇತುವೆ ಹಾಗೂ ಜೋಗದ ಜಲಪಾತ ಎರಡು ವೀಕ್ಷಣೆಗೆ 6 ಜನರಿಗೆ ರೂ.75,000 ನಿಗದಿ ಮಾಡಲಾಗಿದೆ ಎಂದರು.

ನಾಳೆಯಿಂದ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಆಯೋಜಿಸಿರುವ ಹೆಲಿ ಟೂರಿಸಂಗೆ ಟಿಕೆಟ್ ಬುಕ್ ಮಾಡಲು +919945563294 ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಸಾಗರದ ಸಮಸ್ತ ನಾಗಗರೀಕರು ಇದರ ಸದುಪಯೋಗ ಪಡಿಸಿಕೊಂಡು, ಮೊದಲ ಬಾರಿಗೆ ಆಯೋಜಿಸಿರುವ ಹೆಲಿ ಟೂರಿಸಂ ಯಶ್ವಿಗೊಳಿಸುವಂತೆ ಆಯೋಜಕರಾದಂತ ಕಿರಣ್ ದೊಡ್ಮನಿ ಮನವಿ ಮಾಡಿದರು.

ಈ ಸುದ್ದಿಗೋಷ್ಠಿಯಲ್ಲಿ ದಿನೇಶ್, ಧನಂಜಯ್, ಸುಜಿತ್, ಲೀಲು, ಕೃಷ್ಣ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM1 Min Read

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM1 Min Read

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM2 Mins Read
Recent News

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM
State News
KARNATAKA

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

By kannadanewsnow0511/04/2026 5:39 AM KARNATAKA 1 Min Read

ಬೆಂಗಳೂರು : ಉಷ್ಣಾಂಶ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಸುಡುಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ…

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.