ಬೆಳಗಾವಿ : ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಭೀಕರ ಕೊಲೆಯಾಗಿದೆ. ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ಕೊಲೆ ನಡೆದಿದ್ದು, ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ (48) ಭೀಕರವಾಗಿ ಕೊಲೆಯಾಗಿದ್ದಾರೆ.
ಎರಡು ಸಿಗರೇಟ್ ಮತ್ತು ನೀರಿನ ಬಾಟಲಿ ತೆಗೆದುಕೊಂಡಿದ್ದ ನಾಲ್ವರು, ಹಣ ಕೊಡದೆ ಹೋಗುತ್ತಿದ್ದರು. ಈ ವೇಳೆ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ ದುಡ್ಡು ಯಾಕೆ ಕೊಡಲ್ಲ ದುಡ್ಡು ಕೊಡಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಾಲ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.
ಮನೆ ಯಜಮಾನನನ್ನು ಕಳೆದುಕೊಂಡು ಕುಟುಂಬದ ಸದಸ್ಯರ ಆಕ್ರಂದನ ಇದೀಗ ಮುಗಿಲುಮುಟ್ಟಿದ್ದು, ಘಟನೆ ಸಂಬಂಧ ಪ್ರಜ್ವಲ್ ಪಾಟೀಲ್, ನಿಖಿಲ್ ಚೌಗಲೆ, ವಿವೇಕ ಚೌಗಲೆ ಹಾಗೂ ಶ್ರೀಧರ್ ಪಾಟೀಲ್ ಯನ್ನು ಕಾಕತಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








