ಶಿವಮೊಗ್ಗ: ಸಾಗರದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಆಡಳಿತ ವಿರೋಧಿ ನಡೆ ತೋರುತ್ತಿದ್ದಾರೆ. ಅವರ ನಿಲುವು ಗ್ರಾಮಾಭಿವೃದ್ಧಿಗೆ ಅಡ್ಡಿಯಾಗಿದೆ ಎಂಬುದಾಗಿ ತಾಳಗುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬೆಕ್ಕೋಡು ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನೆಗೆ ಮುಂದಾಗಿದ್ದವನ್ನು ಮನವೊಲಿಸಿದ ಅಧ್ಯಕ್ಷ
ಇಂದು ಸಾಗರ ತಾಲ್ಲೂಕು ಇಒ ಶಿವಪ್ರಕಾಶ್ ನಡೆ ಖಂಡಿಸಿ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಅಣಕು ಶವಯಾತ್ರೆ ಹಮ್ಮಕಕೊಳ್ಳಲಾಗಿತ್ತು. ತಾಳಗುಪ್ಪ ಗ್ರಾಮಸ್ಥರು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ದಲಿತ ಸಂಘಟನೆಗಳಿಂದ ಇಒ ಶಿವಪ್ರಕಾಶ್ ನಡೆ ಖಂಡಿಸಿ ಅಣಕು ಶವಯಾತ್ರೆಗೆ ನಿರ್ಧರಿಸಲಾಗಿತ್ತು. ಆದರೆ ಅವರನ್ನು ತಾಳಗುಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬೆಕ್ಕೋಡು ಮನವೊಲಿಸಿ, ಅಣಕು ಶವಯಾತ್ರೆ ಪ್ರತಿಭಟನೆ ಮಾಡದಲ್ಲಿ ನಿಲ್ಲಿಸಿದ್ದಾರೆ.
ಇಒ ಶಿವಪ್ರಕಾಶ್ ನಡೆಗೆ ಆಕ್ರೋಶ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಆಡಳಿತ ವಿರೋಧಿ ನಡೆಯನ್ನು ತೋರುತ್ತಿದ್ದಾರೆ. ನಾವು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಹರಾಜು ನಿಯಮ ಪಾಲಿಸಿಯೇ ಮಾಡಿದ್ದೇವೆ ಎಂದರು.
ಕಳೆದ ಬಾರಿಯಂತೆ ಈ ಬಾರಿಯೂ ಹರಾಜು
ಈ ಹಿಂದಿನಿಂದಲೂ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆ ಸೇರಿ ಇತರೆ ಹರಾಜು ಪ್ರಕ್ರಿಯೆ ನಡೆದ ರೀತಿಯಲ್ಲೇ ಈ ಬಾರಿಯೂ ಮಾಡಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಯ 2 ತಿಂಗಳ ಮೊದಲು ಬಜೆಟ್ ಮಂಡನೆ ಮಾಡುವುದಿಲ್ಲವೇ ಅಂತ ಕಿಡಿಕಾರಿದರು.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ಅಧಿಕಾರಿಯ ತುಘಲಕ್ ದರ್ಬಾರೋ?
ಈ ಹಿಂದೆಯೂ ತಾಳಗುಪ್ಪ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ನಡೆಸಿದವರು ಮುಂಚಿತವಾಗಿಯೇ ಹರಾಜು ಪ್ರಕ್ರಿಯೆ ನಡೆಸಿದ್ದಾರೆ. ನಾವು ಈಗ ಮಾಡಿರೋದು ಹಾಗೆಯೇ. ಆಗ ನಿಯಮ ಪಾಲನೆ ಅಂದು, ಈಗ ನಿಯಮ ಉಲ್ಲಂಘನೆ ಎಂಬುದು ಎಷ್ಟು ಸರಿ? ಇದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ಅಧಿಕಾರಿಯ ತುಘಲಕ್ ದರ್ಬಾರೋ? ಎಂದು ಪ್ರಶ್ನಿಸಿದ್ದಾರೆ.
ಸಾಗರದ ಮಾರಿ ಜಾತ್ರೆ ಹಿನ್ನಲೆಯಲ್ಲಿ ಇಒ ಅಣಕು ಶವಯಾತ್ರೆ ಪ್ರತಿಭಟನೆ ಮುಂದೂಡಿಕೆ
ಸಾಗರದಲ್ಲಿ ಇತಿಹಾಸ ಪ್ರಸಿದ್ಧ ಮಾರಿಕಾಂಬ ಜಾತ್ರೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಪ್ರತಿಭಟನೆ ನಡೆಸಿದರೇ ಜಾತ್ರಾ ಬಂದೋಬಸ್ತ್ ಗೂ ಅಡ್ಡಿ ಉಂಟಾಗಲಿದೆ. ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಇಂದಿನ ಇಒ ಶಿವಪ್ರಕಾಶ್ ಅಣಕು ಶವಯಾತ್ರೆ ಪ್ರತಿಭಟನೆ ಮಾಡದಂತೆ ಪ್ರತಿಭಟನಾಕಾರರನ್ನು ಮನವೊಲಿಸಿ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಇಒ ನಡೆ ಹೀಗೆ ಮುಂದುವರೆಸಿದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








