ಶಿವಮೊಗ್ಗ : ಅಂಚೆ ಇಲಾಖೆ ವತಿಯಿಂದ ಶಾಖಾ ಅಂಚೆಪಾಲಕ, ಸಹಾಯಕ ಅಂಚೆಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಅಂಚೆ ವಿಭಾಗದಲ್ಲಿ 57 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ವೆಬ್ ಸೈಟ್ https://indiapost.gov.in/gdsonlineengagement ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಅರ್ಜಿ ನೋಂದಣಿ ಮಾಡಲು ಫೆ.14 ಹಾಗೂ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕಪಾವತಿಸಲು ಫೆ.16 ಕಡೆಯ ದಿನವಾಗಿದೆ. ಎಲ್ಲ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಹಾಗೂ ಗಣಿತ ಮತ್ತು ಇಂಗ್ಲೀಷ್ ನಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು. ವಯೋಮಿತಿ 18 ರಿಂದ 40 ವರ್ಷವಿದ್ದು ಮೀಸಲು ವರ್ಗಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ. ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕವೇ ನೇಮಕಾತಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-222835 ನ್ನು ಸಂರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ರಂಜಾನ್ ಮಾಸದ ಹಿನ್ನಲೆ: ಮಾರ್ಚ್.20ರವರೆಗೆ ರಾಜ್ಯದ ‘ಉರ್ದು ಪ್ರಾಥಮಿಕ, ಪ್ರೌಢ ಶಾಲೆ’ಗಳ ಅವಧಿ ಬದಲಾವಣೆ








