ಚಾಮರಾಜನಗರ : ಫ್ಲೋರೈಡ್ ಮಿಶ್ರಿತ ನೀರು ಕುಡಿದು ಕಿಡ್ನಿ ಡ್ಯಾಮೇಜ್ ಆಗಿದ್ದು, ಚಾಮರಾಜನಗರದಲ್ಲಿ 47 ಜನರು ಕಿಡ್ನಿ ಕಳೆದುಕೊಂಡಿದ್ದಾರೆ. ಕಿಡ್ನಿ ವೈಫಲ್ಯ, ಥೈರಾಯ್ಡ್ ಹೈಪರ್ ಟೆನ್ಷನ್ ಚಿಂತೆ ಕಾಡುತ್ತಿದ್ದು, ಫ್ಲೋರೈಡ್ ಮಿಶ್ರಿ ನೀರಿನಿಂದ ಹಲ್ಲುಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿದೆ. ಮಾರ್ಟಳ್ಳಿ, ಸುಳ್ವಾಡಿ ಗ್ರಾಮಸ್ಥರ ಗೋಳು ಹೇಳ ತೀರದಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಹಳ್ಳಿಗಳ 47 ಜನ ಇದೀಗ ಕಿಡ್ನಿ ಕಳೆದುಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಫ್ಲೋರೈಡ್ ನಿಶ್ಚಿತ ನೀರನ್ನೆ ಸೇವನೆ ಮಾಡುತ್ತಿದ್ದಾರೆ ಪಂಚಾಯಿತಿ ಪೂರೈಸುವ ನೀರು ಗ್ರಾಮಾಂತರ ಸೇವಿಸುತ್ತಿದ್ದು ಶುದ್ಧ ನೀರಿಗಾಗಿ ಮನವಿ ಮಾಡಿದರು ಕೂಡ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದೆ ಎಂದು ಆರೋಪ ಕೇಳಿ ಬಂದಿದೆ.








