ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ದಿನವೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಈ ಒಂದು ಪ್ರಕರಣದ ಆರೋಪಿಯಾಗಿರುವ ಅಕ್ಷಯನನ್ನು ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದೆ. ತನಿಖೆಯ ವೇಳೆ ಹಣ ಕೊಡದಿದ್ದಕ್ಕೆ ತಂದೆ ತಾಯಿ ತಂಗಿಯ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.
ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಅಕ್ಷಯ್ ಕಥೆ ಕಟ್ಟಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಅಕ್ಷಯ್ ಬೆಟ್ಟಿಂಗ್ ಮತ್ತು ಜೂಜಿನ ಚಟಕ್ಕೆ ಬಿದ್ದಿದ್ದ. ಹಣದ ವಿಚಾರವಾಗಿ ಮನೆಯವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಷಯ್ ಕುಟುಂಬ ಒಂದು ಮನೆ ಹೊಂದಿತ್ತು.
ಆ ಮನೆ ಮಾರಾಟದಿಂದ ಒಂದೂವರೆ ಕೋಟಿ ಹಣ ಬರುತ್ತಿತ್ತು. ಈ ಹಣವನ್ನು ತಂದೆ ಮದುವೆಗೆ ಇಟ್ಟುಕೊಂಡಿದ್ದರು. ಆದರೆ ಬೆಟ್ಟಿನಿಂದ ಅಕ್ಷಯ ಸಾಲ ಮಾಡಿಕೊಂಡಿದ್ದ ಮನೆ ಮಾರಾಟದ ಹಣ ಕೊಡುವಂತೆ ಆತ ಬಲವಂತ ಮಾಡಿದ್ದಾನೆ. ಆದರೆ ಮನೆಯವರು ಈತನಿಗೆ ಹಣ ಕೊಟ್ಟಿರಲಿಲ್ಲ ಆ ಹಣಕ್ಕಾಗಿ ಅಕ್ಷೆ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ








