ಬೆಂಗಳೂರು : ಕಾನ್ಫಿಡೆಂಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರಿಗೆ ಮಾನಸಿಕ ಒತ್ತಡ ಹಾಗೂ ಖಿನ್ನತೆ ಇತ್ತು ಎಂದು ಇದೀಗ ಬಯಲಾಗಿದೆ. ಅದು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಾವಿನ ಕುರಿತಂತೆ ಸಿನಿಮಾ ಮಾಡಲು ಕೂಡ ಸಿಜೆ ರಾಯ್ ನಿರ್ಧರಿಸಿದ್ದರು ಎಂದು ಇದೀಗ ಬಯಲಾಗಿದೆ.
ಹೌದು, ಸಿಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಮನೋವೈದ್ಯರನ್ನು ಭೇಟಿಯಾಗಿದ್ದರು. ಜಯನಗರದ 8ನೇ ಬ್ಲಾಕ್ ನಲ್ಲಿರುವ ಮನೋವೈದ್ಯರನ್ನು ಸಿಜೆ ರಾಯ್ ಭೇಟಿ ಮಾಡಿದ್ದರು. ವೈದರಿಂದ ಕೌನ್ಸೆಲಿಂಗ್ ಸಹ ಪಡೆದಿದ್ದರು. ಸಾಕಷ್ಟು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಪಟ್ಟಿದ್ದರು ಎಂದು ಇದೀಗ ತಿಳಿದು ಬಂದಿದೆ ಸಾಮಾಜಿಕ ಜಾಲತಾಣದಲ್ಲಿ ನೋವು ಸಹ ಹಂಚಿಕೊಂಡಿದ್ದರು. ಸಾವಿನ ಕುರಿತು ಸಿನಿಮಾ ನಿರ್ಮಾಣ ಮಾಡಬೇಕು ಇದೀಗ ಗೊತ್ತಾಗಿದೆ.
ರಾಯ್ ಅವರಿಗೆ ಸಾಕಷ್ಟು ಒತ್ತಡ ಮಾನಸಿಕತೆ ಕಾಡುತ್ತಿತ್ತು. ಆದರೆ ಯಾವ ವಿಚಾರವಾಗಿ ಮಾನಸಿಕತೆಗೆ ಒಳಗಾಗಿದ್ದರು? ಯಾರಿಂದ ಒತ್ತಡ ಇತ್ತು ಯಾವ ವಿಚಾರವಾಗಿ ಅವರಿಗೆ ಒತ್ತಡ ಇತ್ತು? ಎನ್ನುವುದರ ಕುರಿತು ತಿಳಿದು ಬಂದಿಲ್ಲ.ಆದರೆ ಆತ್ಮಹತ್ಯೆಗೂ ಹಿಂದಿನ ದಿನ ಮನೋವೈದ್ಯರನ್ನು ಭೇಟಿಯಾಗಿದ್ದರು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.








