ಶಿವಮೊಗ್ಗ: ಸಾಗರದಲ್ಲಿ ಫೆಬ್ರವರಿ 3ರಿಂದ 11ರವರೆಗೆ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದಕ್ಕೆ ಶುಭಕೋರಿ ನೆಹರೂ ಮೈದಾನದಲ್ಲಿ ಹಾಕಿರುವಂತ ಫ್ಲೆಕ್ಸ್ ಗಳೇ, ಅಮ್ಯೂಸ್ಮೆಂಟ್ ಪಾರ್ಕ್ ಟೆಂಡರ್ ಇಡಿದವರನ್ನು ಸಂಕಷ್ಟಕ್ಕೆ ಸಿಲುಕಿಸಿದಂತೆ ಆಗಿದೆ ಎನ್ನಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಬ್ರಾಸಂ ಎದುರಿನ ನೆಹರೂ ಮೈದಾನದಲ್ಲಿ ಮಾರಿ ಜಾತ್ರೆಯ ಪ್ರಯುಕ್ತ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಈ ಅಮ್ಯೂಸ್ಮೆಂಟ್ ಟೆಂಡರ್ ಪಡೆಯಲು ಬರೋಬ್ಬರಿ 1.34 ಕೋಟಿ ಬಿಡ್ ಮಾಡಲಾಗಿತ್ತು. ಇದು ಸಾಗರದ ಮಾರಿ ಜಾತ್ರೆ ಇತಿಹಾಸದಲ್ಲೇ ಅತೀ ಹೆಚ್ಚಿನ ಬಿಡ್ ಕೂಡ ಎನ್ನಲಾಗುತ್ತಿದೆ. ಆದರೇ ಅಷ್ಟು ದೊಡ್ಡಮಟ್ಟಕ್ಕೆ ಟೆಂಡರ್ ಇಡಿದು, ಅಷ್ಟೇ ಮಟ್ಟದಲ್ಲಿ ಬಂಡವಾಳ ಹಾಕಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸಿದ್ದರೂ, ಸಾರ್ವಜನಿಕರಿಗೆ ಮಾತ್ರ ಕಾಣದಂತೆ ಫ್ಲೆಕ್ಸ್ ಹಾವಳಿಯಲ್ಲಿ ಮುಚ್ಚಿಹೋದಂತೆ ಕಾಣುತ್ತಿದೆ.
ಸಾಗರದ ಬ್ರಾಸಂ ಎದುರಿನ ನೆಹರೂ ಮೈದಾನದ ದಾರಿಯುದ್ಧಕ್ಕೂ ಮಾರಿಕಾಂಬ ಜಾತ್ರೆಗೆ ಶುಭಕೋರಿ ಹಲವರು ಫ್ಲೆಕ್ಸ್ ಅಳವಡಿಸಲಾಗಿದೆ. ಈ ಫ್ಲೆಕ್ಸ್ ಅಳವಡಿಸಿರೋದರಿಂದ ನೆಹರೂ ಮೈದಾನದಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿನ ಆಟಿಕೆಗಳೇ ಕಾರಣದಂತೆ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎನ್ನಲಾಗುತ್ತಿದೆ.
ಫೆಕ್ಸ್ ಹಾವಳಿಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಏನೆಲ್ಲ ಹಾಕಲಾಗಿದೆ ಎಂಬುದೇ ಕಾಣುತ್ತಿಲ್ಲ. ಒಳಗಡೆ ಏನೆಲ್ಲಾ ಐಟಂ ಬಂದಿದ್ದಾವೆ ಎಂಬುದು ಸರಿಯಾಗಿ ಕಾಣದೇ ಹೋಗೋದಕ್ಕೂ ಮನಸ್ಸಾಗುತ್ತಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ. ಹೀಗಾಗಿ ಕೂಡಲೇ ಸಾಗರ ನಗರಸಭೆಯಿಂದ ಫ್ಲೆಕ್ಸ್ ತೆರವುಗೊಳಿಸಿ, ಅಮ್ಯೂಸ್ಮೆಂಟ್ ಪಾರ್ಕ್ ಜನರನ್ನು ಸೆಳೆಯುವ ಕೆಲಸ ಮಾಡಬೇಕು ಎಂಬುದು ಅಮ್ಯೂಸ್ಮೆಂಟ್ ಪಾರ್ಕ್ ಪ್ರಿಯರ ಒತ್ತಾಯವಾಗಿದೆ.
ಒಟ್ಟಾರೆಯಾಗಿ ಸಾಗರದ ನೆಹರೂ ಮೈದಾನದ ಬ್ರಾಸಂ ಮುಂಭಾಗದಲ್ಲಿನ ಫ್ಲೆಕ್ಸ್ ಹಾವಳಿಯ ಭರಾಟೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಆದಾಯಕ್ಕೆ ಹೊಡೆತ ಬೀಳುವ ಆತಂಕ ಶುರುವಾಗಿದೆ. ಈ ಬಗ್ಗೆ ಸಾಗರದ ತಾಲ್ಲೂಕು ಆಡಳಿತ, ಮಾರಿಕಾಂಬ ದೇವಿ ಸಮಿತಿಯವರು ಗಮನ ಹರಿಸಿ, ಫ್ಲೆಕ್ಸ್ ತೆರವುಗೊಳಿಸೋ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.








