ನವದೆಹಲಿ : ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ನಾಲ್ಕು ರಾಜ್ಯಗಳಿಗೆ ಅರ್ಥ ಮಿನೆಲಾರ್ ಕಾರಿಡಾರ್ ಘೋಷಣೆ ಮಾಡಿದರು. ತಮಿಳುನಾಡು ಆಂಧ್ರಪ್ರದೇಶ ಒಡಿಶಾ ಮತ್ತು ಕೇರಳಗೆ ಬಂಪರ್ ಘೋಷಣೆ ಮಾಡಿದರು.
ಬಜೆಟ್ ಆರಂಭಿಸಿದ ನಿರ್ಮಲ ಸೀತಾರಾಮನ್ ಸೆಮಿಕಂಡಕ್ಟರ್ ಮಿಷನ್ 2.0 ಘೋಷಿಸಿದರು ಸಮೀಕಂಡಕ್ಟರ್ ಮಿಷನ್ ಗೆ 40,000 ಕೋಟಿ ಫಂಡ್ ಘೋಷಣೆ ಮಾಡಿದರು. ನಮ್ಮ ತಯಾರಿಕೆ ವಲಯಕ್ಕೆ ಹೆಚ್ಚು ಶಕ್ತಿ ಕೊಡುತ್ತಿದ್ದೇವೆ. ಎಂದು ನಿರ್ಮಲ ಸೀತಾರಾಮನ್ ತಿಳಿಸಿದರು.
ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡಿದ್ದೇವೆ. ವಿಕಸಿತ ಭಾರತದತ್ತ ಹೆಜ್ಜೆ ಇಟ್ಟಿದ್ದೇವೆ ಅಭಿವೃದ್ಧಿ ಹೊಂದಿದ್ದೇವೆ. ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡಿದೆ ಮೋದಿ ಅವರು ವಿಕಸಿತ ಭಾರತಕ್ಕೆ ಕರೆಕೊಟ್ಟಿದ್ದಾರೆ ಜಾಗತೀಕರಣ ಮಾರುಕಟ್ಟೆಯೊಂದಿಗೆ ಪೈಪೋಟಿ ನೀಡುತ್ತಿದ್ದೇವೆ 2047ರ ಗುರಿಯನ್ನು ಪ್ರಧಾನಿ ಮೋದಿ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ವಿಕಸಿತ ಭಾರತದ ಗುರುವಿನ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಭಾರತ ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ ಜಗತ್ತಿನ ನಂಬರ್ ಒನ್ ಅರ್ಥ ವ್ಯವಸ್ಥೆಯ ಗುರಿ ಹೊಂದಲಾಗಿದ್ದು ಯುವ ಶಕ್ತಿ ಬಜೆಟ್ ಮಂಡಿಸುತ್ತಿದ್ದೇನೆ ಕರ್ತವ್ಯ ಭವನದಲ್ಲಿ ಬಜೆಟ್ ಸಿದ್ಧವಾಗಿದೆ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿದ ಮೊದಲ ಬಜೆಟ್ ಆಗಿದ್ದು ಭಾರತದ ಆರ್ಥಿಕ ವ್ಯವಸ್ಥೆ ಬೆಳವಣಿಗೆ ಹೊಂದಿದೆ ನಮ್ಮ ಸರ್ಕಾರದ ಸಂಕಲ್ಪ ಬಡವರ ಕಲ್ಯಾಣವಾಗಿದೆ.




