ಬೆಂಗಳೂರು: ರಾಜ್ಯಾಧ್ಯಂತ ಸರ್ಕಾರಿ ಕಚೇರಿ, ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರಿನ ಬಳಕೆ ಕಟ್ಟು ನಿಟ್ಟಾಗಿ ನಿಷೇಧಿಸಿ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಿನಾಂಕ 28-10-2025ರಂದು ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರು ಬಳಕೆ ನಿಷೇಧಿಸಿ, ನಂದಿನಿ ತಿನಿಸುಗಳನ್ನು ಬಳಕೆ ಮಾಡುವಂತೆ ಟಿಪ್ಪಣಿ ಹೊರಡಿಸಿದ್ದರು. ಹೀಗಿದ್ದರೂ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿರಲಿಲ್ಲ.
ಈ ಎಲ್ಲಾ ಕಾರಣದಿಂದಾಗಿ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿರಾಜ್ಯಾದ್ಯಂತ ಸರ್ಕಾರಿ ಕಛೇರಿಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಸುವಂತೆ ಹಾಗೂ ಕರ್ನಾಟಕ ಸರ್ಕಾರದ ಎಲ್ಲಾ ಕಾರ್ಯಕ್ರಮ / ಕಚೇರಿಗಳ ಸಭೆಗಳಲ್ಲಿ ಕರ್ನಾಟಕ ಮಿಲ್, ಫೆಡರೇಶನ್ (KMF) ನ ‘ನಂದಿನಿ’ ತಿನಿಸುಗಳನ್ನು ಬಳಸುವಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.

BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಈಗ ಮೆಟ್ರೋ ರೈಲಿನಲ್ಲಿ ಈ ಎಲ್ಲವೂ ನಿಷೇಧ, ತಪ್ಪಿದ್ರೆ ಕೇಸ್, ದಂಡ ಫಿಕ್ಸ್








