ವಿಜಯನಗರ : ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆಯ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಅಕ್ಷಯ್ ಹೊರಗಡೆ ಇದ್ದ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿದ್ದೇನೆ ಮನೆಗೆ ಬಾ ಎಂದು ಕರೆಸಿ ಚಾಕುವಿನಿಂದ ಇರಿದು ಮನೆಯ ಹಾಲ್ ನಲ್ಲಿಯೇ ಆಕೆಯ ಶವ ಹೂತು ಹಾಕಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಹೌದು ಮೊದಲು ತಾಯಿಯನ್ನು ಪಾಪಿ ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ತಾಯಿ ಜಯಲಕ್ಷ್ಮಿಯನ್ನು ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಕೊಠಡಿಯಲ್ಲಿ ತಾಯಿಯ ಶವವನ್ನು ಹಾಕಿದ್ದಾನೆ . ನಂತರ ತಂಗಿಗೆ ಕರೆ ಮಾಡಿ ಮನೆಗೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾನೆ. ನಿನಗೆ ಗಿಫ್ಟ್ ತಂದಿದ್ದೇನೆ ಅಂತ ಕರೆದು ಕೊಲೆ ಮಾಡಿದ್ದಾನೆ. ತಂಗಿ ತಾಯಿಯ ಮೃತ ದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದಾನೆ.
ಆನಂತರ ಮನೆಗೆ ಬಂದು ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ತಂದೆಯನ್ನು ಸಹ ಕೊಲೆ ಮಾಡಿದ್ದಾನೆ. ನಂತರ ಮನೆಯ ಹಾಲ್ ನಲ್ಲಿಯೇ ಮೂವರು ಮೃತದೇಹಗಳನ್ನು ಹೂತು ಹಾಕಿದ್ದಾನೆ. ಜನವರಿ 27ರಂದು ತಂದೆ ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ. ತಂದೆ ಭೀಮರಾಜ್ ತಾಯಿ ವಿಜಯಲಕ್ಷ್ಮಿ ಹಾಗೂ ಸಹೋದರಿಯ ಅಮೃತ ಳನ್ನು ಕೊಲೆ ಮಾಡಿದ್ದಾನೆ.








