ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತಂದೆ-ತಾಯಿ ಹಾಗೂ ಸಹೋದರಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮನೆಯ ಹಾಲ್ ನಲ್ಲಿ ಹೂತು ಹಾಕಿದ್ದ ಶವಗಳನ್ನು ಇದೀಗ ಹೊರತೆಗೆಲಾಗಿದೆ.
ಮನೆಯ ಹಾಲ್ ನಲ್ಲಿಯೇ ಆರೋಪಿ ಅಕ್ಷಯ್ ತಂದೆ ತಾಯಿ ಹಾಗೂ ಸಹೋದರಿಯ ಶವಗಳನ್ನು ಹೂತು ಹಾಕಿದ್ದ. ಒಂದೇ ಗುಂಡಿಯಲ್ಲಿ ಮೂರು ಶವಗಳನ್ನು ಹೂತಿದ್ದ ಅಕ್ಷಯ್, ಬಳಿಕ ಪೊಲೀಸರಿಗೆ ನಾಪತ್ತೆಯಾಗಿರುವ ಕುರಿತು ಕೆಸ್ ದಾಖಲಿಸಿದ್ದಾನೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಸದ್ಯ ಮೂವರು ಶವಗಳನ್ನ ಕೊಟ್ಟೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಪ್ರಕರಣದ ಹಿನ್ನೆಲೆ
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಜನವರಿ 27 ರಂದು ಭೀಕರ ಕುಟುಂಬ ಕೊಲೆ ನಡೆದಿದೆ. ಅರೋಪಿ ಅಕ್ಷಯ್ ಕುಮಾರ್ ತಮ್ಮ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತಾಕಿದ್ದಾನೆ.
ಸ್ಥಳಕ್ಕೆ ಶೀಘ್ರವೇ ಕೊಟ್ಟೂರು ಠಾಣೆಯ ಪೊಲೀಸರು ಭೇಟಿ ನೀಡಿ ಅರೋಪಿಯನ್ನು ಕರೆತರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮನೆ ಪರಿಶೀಲನೆ ನಡೆಸಿ, ಸ್ಥಳವನ್ನು ಸೀಲ್ ಮಾಡಿ ಕಾರ್ಯಚರಣೆ ನಡೆಸಲಾಗುವುದು ಎಂದು ವರದಿ ತಿಳಿಸಿದೆ.
ಆರೋಪಿ ಅಕ್ಷಯ್ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಗೆ ಹೋಗಿ ತನ್ನ ಕುಟುಂಬ ಕಾಣೆಯಾಗಿದೆ ಎಂದು ಮಿಸ್ಸಿಂಗ್ ದೂರು ನೀಡಲು ಯತ್ನಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.ವಿಚಾರಣೆ ವೇಳೆ, ಕೊಲೆ ಮಾಡುವ ಬಗ್ಗೆ ಬಾಯ್ಬಿಟ್ಟಿದ್ದಾನೆ.








