ಕೊಡಗು : ಕಾಡಾನೆ ಜೊತೆಗೆ ಶಾಲಾ ವಾಹನ ಚಾಲಕ ಹುಚ್ಚಾಟ ನಡೆಸಿದ್ದಾನೆ. ವಿಡಿಯೋ ಮಾಡುತ್ತಿದ್ದಾಗ ಕಾಡಾನೆ ಶಾಲಾ ಬಸ್ ಅನ್ನು ಅಟ್ಟಾಡಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರಿ ಬಳಿ ಈ ಒಂದು ಘಟನೆ ನಡೆದಿದೆ. ಮಗಳ ಕೈಯಲ್ಲಿ ಚಾಲಕ ಸುನಿಲ್ ವಿಡಿಯೋ ಮಾಡಿಸಿದ್ದಾನೆ.
ಆನೆ ಹಿಮ್ಮುಖವಾಗಿ ಶಾಲಾ ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾನೆ. ಶಾಲಾ ಮಕ್ಕಳನ್ನು ಬಿಟ್ಟು ಬರುವಾಗ ಒಂಟಿ ಸಲಗ ಎದುರಾಗಿತ್ತು. ವಾಹನ ನಿಲ್ಲಿಸಿ ಸುನಿಲ್ ಮಗಳಿಗೆ ವಿಡಿಯೋ ಮಾಡುವಂತೆ ಸೂಚನೆ ನೀಡಿದ್ದಾನೆ. ಸಿದ್ದಾಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ ಇದಾಗಿದ್ದು ಚಾಲಕನ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








