ನವದೆಹಲಿ : ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 274 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಶ್ರೇಷ್ಠ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಜನವರಿ 30ರ ರಾತ್ರಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಇದು ಅವರ ಫಾಲೋವರ್ಸ್ ಅನ್ನು ಗೊಂದಲಕ್ಕೀಡು ಮಾಡಿದ್ದಲ್ಲದೇ ಆನ್‌ಲೈನ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಕೊಹ್ಲಿ ಇನ್‌ಸ್ಟಾಗ್ರಾಮ್ ಖಾತೆ ಡಿ-ಆಕ್ಟಿವೇಟ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿ ಇದರ ಬಗ್ಗೆಯೇ ಬಿಸಿಬಿಸಿ ಚರ್ಚೆ ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಏನೋ ಮಿಸ್ ಆಗಿದೆ ಎಂದು ಅನುಮಾನ ವ್ಯಕ್ತವಾಗಿದೆ. ವಿರಾಟ್ ಕೊಹ್ಲಿ ಈಗ ಕ್ರೀಸ್‌ನಲ್ಲಿ ಇಲ್ಲದಿರಬಹುದು, ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಅನುಪಸ್ಥಿತಿಯು ಅಭಿಮಾನಿಗಳನ್ನು ದುಃಖಿತರನ್ನಾಗಿ ಮಾಡಿದೆ.
ಆದರೆ ಇದೀಗ ಕೊಹ್ಲಿ ಅಕೌಂಟ್ ಆಕ್ಟಿವೇಟ್ ಆಗಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಹೌದು ಜನವರಿ 30 ರಂದು 274 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ ಅವರ ಖಾತೆಯು ಇನ್‌ಸ್ಟಾಗ್ರಾಮ್‌ನಿಂದ ಕಣ್ಮರೆಯಾಗಿತ್ತು. ಸ್ವಲ್ಪ ಸಮಯದ ನಂತರ, ಖಾತೆಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ.








