Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

SHOCKING : ಖ್ಯಾತ ಆಹಾರ ಸಂಸ್ಥೆಯ `ಹಲ್ದಿರಾಮ್ಸ್’ ಸೇವ್ ಪುರಿಯಲ್ಲಿ ಜೀವಂತ ಹುಳು ಪತ್ತೆ : ಬೆಚ್ಚಿಬಿದ್ದ ಗ್ರಾಹಕರು | WATCH VIDEO

19/04/2026 1:09 PM

BIG UPDATE : ಛತ್ತೀಸ್ ಗಢದಲ್ಲಿ ವೇದಾಂತ ವಿದ್ಯುತ್ ಸ್ಥಾವರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿಕೆ : 10 ಜನರ ವಿರುದ್ಧ FIR ದಾಖಲು.!

19/04/2026 1:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸಹಕಾರಿಗಳಿಗೆ ಗುಡ್ ನ್ಯೂಸ್ : 5 ಲಕ್ಷ ರೂ. ಚಿಕಿತ್ಸೆಯ `ಯಶಸ್ವಿನಿ ಯೋಜನೆ’ ನೋಂದಣಿಗೆ ಸೂಚನೆ.!
KARNATAKA

ರಾಜ್ಯದ ಸಹಕಾರಿಗಳಿಗೆ ಗುಡ್ ನ್ಯೂಸ್ : 5 ಲಕ್ಷ ರೂ. ಚಿಕಿತ್ಸೆಯ `ಯಶಸ್ವಿನಿ ಯೋಜನೆ’ ನೋಂದಣಿಗೆ ಸೂಚನೆ.!

By kannadanewsnow5730/01/2026 6:41 AM

ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯ ಶಸ್ತ್ರಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ 2025-26ನೇ ಸಾಲಿಗೆ ನೋಂದಾಯಿಸಲು ಅರ್ಹ ಫಲಾನುಭವಿಗಳಿಗೆ ಸೂಚಿಸಿದೆ.

ಕರ್ನಾಟಕ ಸೌಹಾರ್ದ ಸಹಕಾರಿ, ಕರ್ನಾಟಕ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು ಮತ್ತು ಸಹಕಾರಿ ನೇಕಾರರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.

ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳ್ಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಸಹಕಾರ ಸಂಘಗಳಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 1 ತಿಂಗಳು ಗತಿಸಿದ್ದಲ್ಲಿ ಈ ಯೋಜನೆಯಡಿಯಲ್ಲಿ ನೋಂದಾಯಿಸಬಹುದಾಗಿದೆ ಹಾಗೂ ವಯೋಮಿತಿಯ ನಿರ್ಬಂಧವಿರುವುದಿಲ್ಲ.

ಯೋಜನೆಯ ಸೌಲಭ್ಯ ಪಡೆಯಲು ಯಶಸ್ವಿನಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲು ಕೋರಿದೆ. ಸರ್ಕಾರದ ಆದೇಶದಂತೆ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ ಅವಧಿಯು ಮಾರ್ಚ್ 31 ರವರೆಗೆ ಮಾತ್ರ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ನೋಂದಾಯಿಸಲು ಕೋರಲಾಗಿದೆ. ಹಾಗೂ ಏಪ್ರಿಲ್ 01 ರಿಂದ ಈ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಎಲ್ಲಾ ವಿವಿಧ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳ ಹಾಗೂ ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಗಂಗಾವತಿ (ಪ್ರಭಾರ) ಮೊ.ಸಂ.: 7899648271, ಕುಷ್ಟಗಿ(ಪ್ರಭಾರ): 7892624164, ಯಲಬುರ್ಗಾ: 8660289535, ಸಹಕಾರ ಸಂಘಗಳ ನಿರೀಕ್ಷಕರು ಕೊಪ್ಪಳ: 7406960336, ಸೌಹಾರ್ದ ಸಂಯೋಜಕರು: 8884460274 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Good news for the state's cooperatives: Notice to register for `Yashaswini Yojana' for treatment worth Rs. 5 lakh!
Share. Facebook Twitter LinkedIn WhatsApp Email

Related Posts

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM2 Mins Read

ರಾಜ್ಯ ಆರೋಗ್ಯ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : 2026ನೇ ಸಾಲಿನ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

19/04/2026 12:58 PM1 Min Read

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆ `ಬಡ್ತಿ’ : ಸರ್ಕಾರದಿಂದ ಮಹತ್ವದ ಆದೇಶ.!

19/04/2026 12:44 PM2 Mins Read
Recent News

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

SHOCKING : ಖ್ಯಾತ ಆಹಾರ ಸಂಸ್ಥೆಯ `ಹಲ್ದಿರಾಮ್ಸ್’ ಸೇವ್ ಪುರಿಯಲ್ಲಿ ಜೀವಂತ ಹುಳು ಪತ್ತೆ : ಬೆಚ್ಚಿಬಿದ್ದ ಗ್ರಾಹಕರು | WATCH VIDEO

19/04/2026 1:09 PM

BIG UPDATE : ಛತ್ತೀಸ್ ಗಢದಲ್ಲಿ ವೇದಾಂತ ವಿದ್ಯುತ್ ಸ್ಥಾವರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿಕೆ : 10 ಜನರ ವಿರುದ್ಧ FIR ದಾಖಲು.!

19/04/2026 1:03 PM

ರಾಜ್ಯ ಆರೋಗ್ಯ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : 2026ನೇ ಸಾಲಿನ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

19/04/2026 12:58 PM
State News
KARNATAKA

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

By kannadanewsnow0519/04/2026 1:15 PM KARNATAKA 2 Mins Read

ಬೆಂಗಳೂರು : ಕರ್ನಾಟಕ ಸರ್ಕಾರ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ…

ರಾಜ್ಯ ಆರೋಗ್ಯ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : 2026ನೇ ಸಾಲಿನ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

19/04/2026 12:58 PM

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆ `ಬಡ್ತಿ’ : ಸರ್ಕಾರದಿಂದ ಮಹತ್ವದ ಆದೇಶ.!

19/04/2026 12:44 PM

ಹಳೆಯ ವಾಹನ ಖರೀದಿ, ಮಾರಾಟ ಮಾಡುತ್ತಿದ್ದೀರಾ?`RC’ ವರ್ಗಾವಣೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

19/04/2026 12:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.