ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆಯನ್ನು ಧರಿಸೋದು ಕಡ್ಡಾಯಗೊಳಿಸಿ ಸಿಎಸ್ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಭಾಗಿಯಾಗಿದ್ದಂತ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಪ್ರತಿ ತಿಂಗಳ ಮೊದಲ ಶನಿವಾರದಂದು ರಾಜ್ಯ ಸರ್ಕಾರಿ ನೌಕರರು ತಪ್ಪದೇ ಖಾದಿ ಬಟ್ಟೆಯನ್ನು ಧರಿಸುವುದು ಕಡ್ಡಾಯಗೊಳಿಸುವಂತ ನಿರ್ಧಾರವನ್ನು ಇಂದಿನ ಸಿಎಸ್ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಪುರುಷರು ಖಾದಿ ಪ್ಯಾಂಟ್, ಶರ್ಟ್ ಧರಿಸಬೇಕು. ಓವರ್ ಕೋಟ್ ಹಾಕಬೇಕು. ಮಹಿಳೆಯರು ಖಾದಿ ಸಿಲ್ಕ್ ಸೀರೆ, ಚೂಡಿದಾರ ಧರಿಸಬೇಕು ಎಂಬುದಾಗಿ ಸೂಚಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಈ ಸಂಬಂಧ ಆದೇಶ ಹೊರ ಬೀಳಲಿದೆ.








