ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಸುಳ್ಳು, ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡವರ ವಿರುದ್ಧ ಕ್ರಮಜರುಗಿಸೋದಕ್ಕೆ ಸರ್ಕಾರ ಆದೇಶಿಸಿದೆ. ಆ ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸೋವರೆಗೂ ಸ್ಟೇ ನೀಡಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ:26.11.2025ರಂದು ನಡೆದ ಸಭೆಯಲ್ಲಿ ಹಾಜರಿದ ಸಮುದಾಯದ ಮುಖಂಡರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದಾಗಿ ಪ್ರಸ್ತಾಪಿಸಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿರುತ್ತಾರೆ ಎಂದಿದೆ.
ಸುಳ್ಳು, ಜಾತಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆ The Karnataka Scheduled Casts, Scheduled Tribes and Other Backward classes (Reservation of Appointment Etc.) Act 1990ರಲ್ಲಿ ಜಿಲ್ಲಾಧಿಕಾರಿಗಳಿಗೆ ಪುದತ್ತವಾದ ಅಧಿಕಾರದ ಕುರಿತು ಮಾನ್ಯ ಉಚ್ಛ ನ್ಯಾಯಾಲಯದ W.P.13777/20230 (GM CC PIL) dada. “The Deputy Commissioner may, stay the execution of any such decision or order pending the exercise of his powers under sub- section (1) in respect thereof” ಎಂದು ನಿರ್ದೇಶಿಸಿರುತ್ತದೆ ಎಂದು ಹೇಳಿದೆ.
ಆದುದರಿಂದ, ಜಿಲ್ಲಾ ಧಿಕಾರಿಗಳು, The Karnataka Scheduled Casts, Scheduled Tribes and Other Backward classes (Reservation of Appointment Etc.) Act 1990 ಜಾತಿ ಪುಮಾಣ ಪತ್ರಗಳು ಪಡೆದಿದಲ್ಲಿ, ಕಾಯ 4-F ರಡಿಯಲ್ಲಿ ನಿಯಮಾನುಸಾರ ಕ್ರಮವಹಿಸುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.









