ಬೆಂಗಳೂರು : ಗುತ್ತಿಗೆದಾರರ ಹಣ ಬಿಡುಗಡೆ ಮಾಡದೆ ಸರ್ಕಾರ ಬಾಗಿ ಉಳಿಸಿಕೊಂಡಿದೆ ವಿವಿಧ ಇಲಾಖೆಗಳ ಗುತ್ತಿಗೆದಾರರ ಹಣವನ್ನು ಇದೀಗ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದ್ದು, ರಾಜ್ಯ ಸರ್ಕಾರ ಒಟ್ಟು 37,370 ಕೋಟಿ ರೂಪಾಯಿ ಗುತ್ತಿಗೆದಾರರಿಗೆ ನೀಡಬೇಕಿದೆ.
ಲೋಕೋಪಯೋಗಿ ಇಲಾಖೆಯಿಂದ 13,000 ಕೋಟಿ ರೂಪಾಯಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3800 ಕೋಟಿ, ಸಣ್ಣ ನೀರಾವರಿ ಇಲಾಖೆಯ 3000 ಕೋಟಿ ರೂಪಾಯಿ, ನಗರಾಭಿವೃದ್ಧಿ ಇಲಾಖೆಯ 2000 ಕೋಟಿ, ವಸತಿ ಮತ್ತು ಇಲಾಖೆಯ 2600 ಕೋಟಿ ರೂಪಾಯಿ, ಕಾರ್ಮಿಕ ಇಲಾಖೆಯ 2000 ಕೋಟಿ ರೂಪಾಯಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 2600 ಕೋಟಿ ರೂಪಾಯಿ ಸೇರಿದಂತೆ ಒಟ್ಟು 37,370 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಬಾಗಿ ಉಳಿಸಿಕೊಂಡಿದೆ.








