ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸಿದ್ದು, ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಹಸ್ತಕ್ಷೇಪ ಮಾಡಿದ ಹಿನ್ನೆಲೆಯಲ್ಲಿ ಯತೀಂದ್ರ ನಡೆಗೆ ಬೇಸತ್ತು ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದರು ಎನ್ನುವ ಸುದ್ದಿ ಭಾರಿ ಚರ್ಚಿಗೆ ಕಾರಣವಾಗಿದೆ.
ಹೌದು ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ನೀಡಲು ಸಚಿವ ಕೆ ಜೆ ಜಾರ್ಜ್ ಮುಂದಾಗಿದ್ದರು ಎನ್ನುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಕೇಜೆ ಜಾರ್ಜ್ ವಿಶ್ವಾಸಕ್ಕೆ ಪಡೆಯದೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದ ಕೆ ಜೆ ಚಾರ್ಜ್ ಬೇಸರ ಹೊರಹಾಕಿದ್ದು ಯತೀಂದ್ರ ಹಸ್ತಕ್ಷ ಬಗ್ಗೆ ಸಚಿವ ಜಾರ್ಜ್ ಬೇಸರ ಪ್ರತಿಪಡಿಸಿದ್ದಾರೆ.
ಯತೀಂದ್ರ ಹಸ್ತಕ್ಷಪ್ಪಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯಗೆ ಕೆಜೆ ಜಾರ್ಜ್ ರಾಜೀನಾಮೆ ಪತ್ರ ಸಹ ನೀಡಿದ್ದರು ಎನ್ನಲಾಗಿದೆ. ಸಚಿವನಾಗಿ ನನ್ನ ಮಾತಿಗೆ ಬೆಲೆ ಇಲ್ಲದಿರುವಾಗ ನಾನೇಕೆ ಇರಲಿ? ಈ ಸರ್ಕಾರದಲ್ಲಿ ನಾನೇಕೆ ಇರಲಿ ಎಂದು ಕೇಜೆ ಜಾರ್ಜ್ ಪ್ರಶ್ನೆ ಮಾಡಿದ್ದಾರೆ. ನಾನು ನಿಮ್ಮ ಜೊತೆ ಇರುತ್ತೇನೆ ಆದರೆ ಸರ್ಕಾರದಲ್ಲಿ ಇರುವುದಿಲ್ಲ. ಘಟನೆಯಿಂದ ನೊಂದು ಸಂಪುಟ ಸಭೆಗೂ ಕೂಡ ಕೇಜೆ ಜಾರ್ಜ್ ಗೈರಾಗಿದ್ದರು ಎಂದು ತಿಳಿದು ಬಂದಿದೆ.
ಈ ಒಂದು ಘಟನೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಆಪ್ತರು ಕೆಜೆ ಜಾರ್ಜ್ ಅವರನ್ನು ಭೇಟಿ ಮಾಡಿದ್ದಾರೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮೂಲಕ ಚಾರ್ಜ್ ಸಮಾಧಾನಪಡಿಸಲಾಗಿದೆ ಎಂದು ತಿಳಿದುಬಂದಿದೆ. ಜಾರ್ಜ್ ಅವರನ್ನು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮನವೊಲಿಸಿದ್ದಾರೆ ಎನ್ನಲಾಗಿದೆ. ಬಳಿಕ ಇಂಧನ ಇಲಾಖೆ ಅಧಿಕಾರಿ ಅಮಾನತುವನ್ನು ಸಿಎಂ ಪಡೆದಿದ್ದಾರೆ.








