ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಗೇಟ್ ಮುರಿದುಬಿದ್ದು ಸೆಕ್ಯೂರಿಟಿ ಗಾರ್ಡ್ ಒಬ್ಬರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ವಾಯುವ್ಯ ವಿಭಾಗದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಬಿಲ್ಡಿಂಗ್ ಬಳಿ ಸ್ವಾಮಿ ಎಂಬವರು ಗೇಟ್ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಗೂಡ್ಸ್ ವೆಹಿಕಲ್ ಬಂದಿದ್ದ ವೇಳೆ ಸ್ವಾಮಿ ಗೇಟ್ ಓಪನ್ ಮಾಡಿದ್ದಾರೆ ಈ ವೇಳೆ ಸ್ಲೈಡಿಂಗ್ ಗೇಟ್ ಮುರಿದುಬಿದ್ದು ಸ್ವಾಮಿ (55) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.








