ಹಾಸನ : ಅನೈತಿಕ ಸಂಬಂಧದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಅಡುಗೆ ಕಾಂಟ್ರಾಕ್ಟರ್ ಅನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹಾಸನ ನಗರದ ಕೆಆರ್ ಪುರಂ ಬಡಾವಣೆಯಲ್ಲಿ ತಡರಾತ್ರಿ ಈ ಒಂದು ಘಟನೆ ಸಂಭವಿಸಿದೆ.
ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ (48) ಎಂಬಾತ್ತನ್ನು ಕೊಲೆ ಮಾಡಲಾಗಿದೆ. ಐದಾರು ಬಾರಿ ಚಾಕುವಿನಿಂದ ಇರಿದು ಧರ್ಮೇಂದ್ರ ಎಂಬಾತ ಆನಂದನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಮಹಿಳೆಯ ಜೊತೆಗೆ ಆನಂದ್ ಮತ್ತು ಧರ್ಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಮಹಿಳೆಯ ಜೊತೆ ಧರ್ಮೇಂದ್ರ ಎಂಟು ವರ್ಷಗಳ ಗೆಳೆತನ ಹೊಂದಿದ್ದ. ಈ ನಡುವೆ ಇದೆ ಮಹಿಳೆ ಜೊತೆ ಆನಂದ್ ಸಹ ಸಂಬಂಧ ಹೊಂದಿದ್ದ.
ಈ ವಿಚಾರವಾಗಿ ನಿನ್ನೆ ರಾತ್ರಿ ಆನಂದ್ ಮತ್ತು ಧರ್ಮೇಂದ್ರ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಗುತ್ತಿಗೆದಾರ ಆನಂದ್ ಮನೆಗೆ ತೆರಳಿದ್ದಾನೆ. ಮತ್ತೆ ಫೋನ್ ಮಾಡಿ ಧರ್ಮೇಂದ್ರ ಆನಂದನ್ನು ಕರೆಸಿಕೊಂಡಿದ್ದಾನೆ. ಕುಡಿದ ಅಮಲಿನಲ್ಲಿ ಆನಂದನನ್ನು ಕೊಲೆ ಮಾಡಿ ಧರ್ಮೇಂದ್ರ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಾಸನ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








