ಬೆಳಗಾವಿ : ಪತ್ನಿ ಹೆರಿಗೆಗೆ ತೆರಳಿದಾಗ ಹಳೆ ಪ್ರಿಯತಮೆಯ ಜೊತೆ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಎಂಬಲ್ಲಿ ನಡೆದಿದೆ. ಹಳೆ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಜಗದೀಶ್ ಕವಳೇಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಲ್ಲಾಪುರ ಗ್ರಾಮದ ಜಗದೀಶ್ ಕವಳೇಕರ್ (27) ಹಾಗು ಗಂಗಮ್ಮ (26) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲಿಂದಲೂ ಗಂಗಮ್ಮ ಮತ್ತು ಜಗದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪತ್ನಿ ಹೆರಿಗೆಗೆ ತವರಿಗೆ ತೆರಳಿದ ನಂತರ ಪ್ರಿಯತಮೆಯ ಜೊತೆಯ ಜಗದೀಶ್ ವಾಸಿಸುತ್ತಿದ್ದ. ಎರಡು ತಿಂಗಳಿಂದ ಗಂಗಮಗಳನ್ನು ಜಗದೀಶ್ ಮನೆಗೆ ತಂದು ಇರಿಸಿಕೊಂಡಿದ್ದ.ಜಗದೀಶನನ್ನು ಪ್ರೀತಿಸುತಿದ್ದ ಗಂಗಮ್ಮ ಇನ್ನೂ ಮದುವೆಯಾಗಿರಲಿಲ್ಲ.
ನಿನ್ನೆ ಸಂಜೆ ಬೈಕ್ ನಲ್ಲಿ ಗಂಗಮ್ಮ ಜಗದೀಶ್ ಜೊತೆ ತೆರಳಿದ್ದಾಳೆ, ನದಿಯ ದಡದಲ್ಲಿ ಮೊಬೈಲ್ ಬೈಕ್ ಬಿಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಸ್ಪರ ಅಪ್ಪಿಕೊಂಡು ವೇಲ್ ನಿಂದ ಪ್ರೇಮಿಗಳು ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ, ಬೆಳಿಗ್ಗೆ ನದಿ ದಡದಲ್ಲಿ ಶವಗಳನ್ನು ಕೊಂಡು ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ ರಾಮದುರ್ಘ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








