ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ನೆಲಮಂಗಲದಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ದಾಸನಪುರದ ರಾಮದೇವ್ ಜ್ಯುವೆಲ್ಲರಿಗೆ ನುಗ್ಗಿ ದರೋಡೆಕೋರರು ಗನ್ ತೋರಿಸಿ ದರೋಡೆ ಮಾಡಿದ್ದಾರೆ.
ಖದೀಮರು ಸಂಚು ಮಾಡಿ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಸಂಜೆ ವೇಳೆ ಚಿನ್ನಾಭರಣ ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ಗನ್ ತೋರಿಸಿ ಚಿನ್ನದ ಬಿಸ್ಕೆಟ್ ಗಳನ್ನು ಖದಿಮರು ದೋಚಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರಿಂದ ಈ ಒಂದು ಕೃತ್ಯ ನಡೆದಿದ್ದು, ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳ್ಳರು ಕೈಗೆ ಸಿಕ್ಕಿದಷ್ಟು ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿ ಇಬ್ಬರು ಪರಾಗಿದ್ದಾರೆ. ಈ ವೇಳೆ ದರೋಡೆಕೋರನಿಗೆ ಬಾಲಕರು ಅಲ್ಲಿಯೇ ಪಂಚ್ ಮಾಡಿದ್ದಾರೆ. ಅಂಗಡಿಯಲ್ಲಿ ಇದ್ದವರು ತಿರುಗಿ ಬೀಳುತ್ತಿದ್ದಂತೆ ಇಬ್ಬರು ದರೋಡೆಕರರು ಹೆದರಿದ್ದಾರೆ. ಆಗ ಓಡಿ ಹೋಗುವಾಗ ಕೆಳಗೆ ಬಿದ್ದು ಓರ್ವ ಕಳ್ಳನ ಮೊಬೈಲ್ ಫೋನ್ ಬಿದ್ದಿದ್ದು, ಉತ್ತರಪ್ರದೇಶದ ಮೂಲದ ದರೋಡೆಕೋರರಿಂದ ಈ ಒಂದು ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.a








