ಬೆಂಗಳೂರು: ನಗರದಲ್ಲಿ ಅನ್ನ ಹಾಕಿದ ಮನೆಗೆ ಖತರ್ನಾಕ್ ದಂಪತಿಗಳು ಕನ್ನ ಹಾಕಿರುವಂತ ಘಟನೆ ನಡೆದಿದೆ. ಚಿನ್ನ, ವಜ್ರ, ಬೆಳ್ಳಿ, ನಗರದನ್ನು ದರೋಡೆ ಮಾಡಲಾಗಿದೆ.
ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಈ ಕೃತ್ಯವನ್ನು ಎಸಗಲಾಗಿದೆ. ಮನೆ ಕೆಲಸ ಮಾಡುತ್ತಿದ್ದಂತ ದಿನೇಶ್, ಕಮಲಾ ದಂಪತಿಗಳು ತಮಗೆ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾರೆ.
ಬಿಲ್ಡರ್ ಶಿವಕುಮಾರ್ ಎಂಬುವರ ಮನೆಯಲ್ಲಿ ದಂಪತಿಗಳು ಕಳ್ಳತನದ ಕೈಚಳಕ ಮೆರೆದಿದ್ದಾರೆ. 20 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದಂತ ನೇಪಾಳಿ ದಂಪತಿಗಳು ಕೋಟಿ ಕೋಟಿ ಚಿನ್ನಾಭರಣ, ನಗದು ದೋಚಿದ್ದಾರೆ.
11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಕಳ್ಳತನ ಮಾಡಿದ್ದಾರೆ. 30 ವರ್ಷದಿಂದ ಗಳಿಸಿದ್ದಂತ ಹಣ, ಚಿನ್ನವನ್ನು 30 ನಿಮಿಷಗಳಲ್ಲಿ ದೋಚಿ ನೇಪಾಳಿ ದಂಪತಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಲಾಕರ್ ಇಲ್ಲ ಎಂದು ತಾಯಿ ಬಳಿ ಇಟ್ಟಿದ್ದ ಮಕ್ಕಳು. ಸೊಸೆಯ ಚಿನ್ನಾಭರಣವನ್ನೂ ಮನೆಯಲ್ಲೇ ಲಾಕರ್ ನಲ್ಲಿ ಇಟ್ಟಿದ್ದರು. ಈ ಎಲ್ಲವನ್ನು ದೋಚಿ ಪರಾರಿಯಾಗಿದ್ದಾರೆ.
BIGG NEWS: ರಾಜ್ಯದಲ್ಲಿ ಅನುದಾನಿತ ದಿನದಿಂದಲೇ ಶಿಕ್ಷಕರು ವೇತನಕ್ಕೆ ಅರ್ಹರು: ಹೈಕೋರ್ಟ್ ಮಹತ್ವದ ತೀರ್ಪು








