ಉಡುಪಿ : ಉಡುಪಿಯಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು ಅದರಲ್ಲಿ ಮೈಸೂರು ಮೂಲದ ಯೂಟ್ಯೂಬರ್ ಆದಂತಹ ನಿಶಾ ಮತ್ತು ಮಧುಗೌಡ ಸ್ನೇಹಿತೆ ದಿಶಾ ಕೂಡ ಇದೀಗ ಸಾವನ್ನಪ್ಪಿದ್ದಾರೆ.
ಮೈಸೂರಿನ ಉದಯಗಿರಿಯ ಜಲಾಪುರಿ ನಿವಾಸಿ ದಿಶಾ (23) ಮೃತ ದುರ್ದೈವಿ. ಘಟನೆಯಲ್ಲಿ ಸಿಂಧು, ಶಂಕರಪ್ಪ, ದಿಶಾ ಕೊನೆಯುಸಿರೆಳೆದಿದ್ದಾರೆ. ಧರ್ಮ ರಾಜ್ ಎಂಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.
ಡೆಲ್ಟಾ ಬೀಚ್ನಿಂದ ಟೂರಿಸ್ಟ್ ಬೋಟ್ನಲ್ಲಿ 28 ಮಂದಿ ಪ್ರವಾಸಿಗರು ತೆರಳಿದ್ದರು. ಮೈಸೂರಿನ ಬಿಪಿಓ ಒಂದರಲ್ಲಿ 28 ಮಂದಿ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಎರಡು ಪ್ರತ್ಯೇಕ ಬೋಟ್ ಗಳಲ್ಲಿ ತಲಾ 14 ಮಂದಿ ಯುವಕ-ಯುವತಿಯರು ತೆರಳಿದ್ದರು. ಒಂದು ಬೋಟ್ ಮಗುಚಿ ಸಮುದ್ರ ಪಾಲಾಗಿತ್ತು.








