ಶಿವಮೊಗ್ಗ : ರಾಜ್ಯದಲ್ಲಿ ಕೆಎಫ್ಡಿಗೆ ಮತ್ತೊಂದು ಬಲಿಯಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕಟ್ಟೆಹಕ್ಲು ಗ್ರಾಮದ ಕಿಶೋರ್ (29) ಎಂಬ ಯುವಕ ಮಂಗನ ಕಾಯಿಲೆಗೆ ಬಲಿಯಾಗಿದ್ದಾನೆ.
ಕಳೆದ ಹಲವು ದಿನಗಳಿಂದ ಯುವಕ ಕಿಶೋರ್ ಕೆಎಫ್ಡಿ ಕಾಯಿಲೆಯಿಂದ ಬಳಲುತ್ತಿದ್ದ. ಈ ಹಿನ್ನಲೆ ಕಿಶೋರ್ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಕಿಶೋರ್ ಸಾವನಪ್ಪಿದ್ದಾನೆ.
ಕಟ್ಟೆಹಕ್ಲು ಗ್ರಾಮದ ಕಿಶೋರ್ ಕೆಎಫ್ಡಿ ಪಾಸಿಟಿವ್ ಬಂದಿತ್ತು. ಜನವರಿ 21ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುವಕನನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜನವರಿ 22ಕ್ಕೆ ಕೆಎಫ್ಡಿ ಪಾಸಿಟಿವ್ ವರದಿ ಬಂದಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ಗೆ ರವಾನೆ ಮಾಡಲಾಗಿತ್ತು.
ಅಲ್ಲಿಯೂ ಕೂಡ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗಿನಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಯುವಕನ ಗ್ರಾಮದಲ್ಲಿ ಇದುವರೆಗೂ ಯಾರಲ್ಲೂ ಸಹ ಕೆಎಫ್ಡಿ ಲಕ್ಷಣಗಳು ಹಾಗೂ ಜ್ವರ ಕಂಡು ಬಂದಿಲ್ಲ. ಆದರೆ, ಇವರಿಗೆ ಹೇಗೆ ಜ್ವರ ಬಂತು ಎಂಬುದು ಇನ್ನೂ ಪತ್ತೆಯಾಗಬೇಕಿದೆ.








