ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಹಾರಾಷ್ಟ್ರ ಪೊಲೀಸರು ಫಾರ್ಚುನರ್ ಕಾರು ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ಫಾರ್ಚುನರ್ ಕಾರು ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
400 ಕೋಟಿ ಹಣ ರಾಬರಿ ಪ್ರಕರಣದಲ್ಲಿ ಬಂದಿತ ಆರೋಪಿಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಪಾರು ಚಾಲಕನನ್ನು ಬಂಧಿಸಿ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ದೂರುದಾರ ಸಂದೀಪ್ ಪಾಟೀಲ್ ಅಪಹರಿಸಿದ್ದ ಕಾರು ಚಾಲಕ.ಇಂದು ಸಂಜೆ ಬೆಳಿಗ್ಗೆ ಇಬ್ಬರು ಬಂಧನದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಪರಾರಿ ಆದಂತಹ ಕಿಶೋರ್ ಮತ್ತು ಅಜರಿಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ.








