ಬೆಂಗಳೂರು : ಬೆಂಗಳೂರು ಹೊರಯದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು ಸಿನಿಮಾ ಶೈಲಿಯಲ್ಲಿ ಯುವಕನನ್ನು ಕಿಡ್ನ್ಯಾಪ್ಗೆ ಯತ್ನಿಸಿದ್ದಾರೆ. ಹಾಡ ಹಗಲೇ ನಡು ರಸ್ತೆಯಲ್ಲಿಯೇ ಹಲ್ಲೆ ನಡೆಸಿ ಕಿಡ್ನ್ಯಾಪ್ಗೆ ದುಷ್ಕರ್ಮಿಗಳ ಗ್ಯಾಂಗ್ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ. ಮೂರು ಬೈಕ್ ಒಂದು ಕಾರ್ ನಲ್ಲಿ ಗ್ಯಾಂಗ್ ಬಂದಿದ್ದು ಸುಮಾರು ಎಂಟು ಜನರಿದ್ದ ಗ್ಯಾಂಗ್ ಯುವಕನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ. ಯುವಕ ಕ್ಷಮೆ ಕೇಳಿದರೂ ಗ್ಯಾಂಗ್ ಹಲ್ಲೆ ಮಾಡಿದೆ. ಕಾರ್ ಒಳಗೆ ಯುವಕನನ್ನು ಕೂರಿಸಲು ಯತ್ನಿಸುತ್ತಾರೆ ಆಪರೇಷನ್ ಆಗಿದೆ ಸರ್ ಬಿಟ್ಟುಬಿಡು ಎಂದು ಕೇಳಿದರು ಗ್ಯಾಂಗ್ ಬಿಟ್ಟಿಲ್ಲ. ಕಿರುಚಾಡಿ ಕೇಳಿಕೊಂಡರು, ಪುಡಿ ರೌಡಿಗಳ ಗ್ಯಾಂಗ್ ಬಿಡುವುದಿಲ್ಲ. ಯಾವಾಗ ಸಾರ್ವಜನಿಕರು ಪುಂಡರಿಗೆ ಪ್ರಶ್ನೆ ಮಾಡುತ್ತಾರೋ ಆಗ ಅಲ್ಲಿಂದ ಪರಾರಿಯಾಗಿದ್ದಾರೆ.








