ಗದಗ : ಲಕ್ಕುಂಡಿಯಲ್ಲಿ ಉತ್ಖನ ಕಾರ್ಯ ಮುಂದುವರೆದಿದ್ದು ಇದೀಗ ಉತ್ಖನನ ಸ್ಥಳವಾದ A-1 ನಲ್ಲಿ ಬೃಹದ್ದಾಕಾರದ ಬಿರುಕು ಕಾಣಿಸಿಕೊಂಡಿದ್ದು ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಘಟನೆ ಸ್ಥಳಕ್ಕೆ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಇನ್ನು B-1 ಬ್ಲಾಕ್ ನಲ್ಲಿ ಬೃಹತ್ ಆಕಾರದ ಕಲ್ಲು ಪತ್ತೆಯಾಗಿದ್ದು ಬೃಹದಾಕರ ಕಲ್ಲು ಬೀಳುವ ಆತಂಕ ಎದುರಾಗಿದೆ ಈ ಹಿನ್ನೆಲೆಯಲ್ಲಿ ಮಣ್ಣು ಬಿರಿದುಕೊಂಡಿದ್ದು ಆತಂಕದಲ್ಲಿಯೇ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಕಾರ್ಮಿಕರು ಅಪಾಯದ ಕೆಲಸದಲ್ಲಿ ಆತಂಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಯಾವ ಕ್ಷಣದಲ್ಲಿ ಆದರೂ ಮಣ್ಣು ಕುಸಿಯುವ ಸಾಧ್ಯತೆಯಿದ್ದು ಸ್ಥಳದಲ್ಲಿ ಆತಂಕ ಮನೆ ಮಾಡಿದೆ.








