ದಾವಣಗೆರೆ : ದಾವಣಗೆರೆಯಲ್ಲಿ ಮದುವೆಯಾದ 45 ದಿನದಲ್ಲೇ ನವವಿವಾಹಿತ ಹರೀಶ ಪತ್ನಿ ಬೇರೆ ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ದಾವಣಗೆರೆಯ ಗುಮ್ಮನೂರಿನಲ್ಲಿ ಈ ಒಂದು ಘಟನೆ ನಡೆದಿತ್ತು.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದುವೆ ಮಾಡಿಸಿದ ಯುವತಿಯ ಸೋದರ ಮಾವ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್ ಆತ್ಮಹತ್ಯೆ ಬೆನ್ನಲ್ಲೇ ಸೋದರ ಮಾವ ರುದ್ರೇಶ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹರೀಶ್ ಮತ್ತು ಸರಸ್ವತಿ ಮದುವೆಯನ್ನು ರುದ್ರೇಶ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ಯುವತಿ ಸರಸ್ವತಿ ಬೇರೆ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ. ಇದರಿಂದ ಅವಮಾನ ತಾಳದೆ ರುದ್ರೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದಕ್ಕೂ ಮುನ್ನ ಹರೀಶ್ (30) ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಪತ್ನಿ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಬೇರೆ ಯುವಕನ ಜೊತೆ ಓಡಿ ಹೋಗಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಪತ್ನಿಯಿಂದ ಕಿರುಕುಳ ಸಂಬಂಧಿಕರಿಂದ ಜೀವ ಬೆದರಿಕೆ ಇತ್ತು, ಪತ್ನಿ ಪೋಷಕರು ಹಾಗೂ ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ ಆಗಲಿ ಎಂದು ಹರೀಶ್ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದ. ಇದೀಗ ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.a








