ಬೆಂಗಳೂರು : ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕಾವ್ಯ ಜನಪ್ರಿಯತೆ ಸಹಿಸದೆ ಧಮ್ಕಿ ಮಾಡಿರುವ ಆರೋಪ ಕೇಳಿ ಬಂದಿದೆ. ಪತಿ ಸೋಮಶೇಖರ್ ಸಂಬಂಧಿಕರು ಕಾವ್ಯ ಗೌಡಗೆ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ರವಿಕುಮಾರ್ ಎಂಬಾತ ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯ ಗೌಡ ಅಕ್ಕ ಭವ್ಯ ಗೌಡ ದೂರು ನೀಡಿದ್ದಾರೆ. ಪ್ರೇಮ, ನಂದೀಶ್, ಪ್ರಿಯಾ ಹಾಗು ರವಿಕುಮಾರ್ ವಿರುದ್ಧ ದೂರು ದಾಖಲಾಗಿದೆ. ಘಟನೆಯಿಂದ ನಟಿ ಕಾವ್ಯ ಗೌಡ ಮಾನಸಿಕವಾಗಿ ನೊಂದಿದ್ದಾರೆ.
ಸೋಮಶೇಖರ್ ನಂದೀಶ್ ಇಬ್ಬರು ಸಹೋದರರು ಒಂದೇ ಮನೆಯಲ್ಲಿ ಇಬ್ಬರು ವಾಸವಿದ್ದರು ಹೀಗಾಗಿ ಆಗಾಗ ಕಾವ್ಯ ಮತ್ತು ಪ್ರೇಮ ನಡುವೆ ಮನಸ್ತಾಪ ಆಗುತ್ತಿತ್ತು. ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಆಗುತ್ತಿತ್ತು . ನಿನ್ನೆ ಕಾವ್ಯ ಪ್ರೇಮಾ ಸಂಬಂಧಿಕರು ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ಆಗಿದೆ.
ಈ ಕುರಿತು ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿದವರು ದಾಖಲಾಗಿದೆ ಈ ಗಲಾಟೆಗೆ ಮತ್ತು ಕಾವ್ಯ ಅವರ ಮೇಲಿನ ಸಿಟ್ಟಿಗೆ ಕಾರಣ ಏನು ಅನ್ನುವ ವಿಚಾರ ಬೆಳಕಿಗೆ ಬಂದಾಗ ಕಾವ್ಯ ಜನಪ್ರಿಯತೆಯನ್ನು ಪ್ರೇಮ ಸಹಿಸುತ್ತಿರಲಿಲ್ಲ ಅಂತೆ ಹಾಗಾಗಿ ಒಂದಿಲ್ಲ ಒಂದು ವಿಚಾರಕ್ಕೆ ದಿನಾಲು ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು.








