ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ವಿಳಂಬವೇನು ಇಲ್ಲ. ಅವರ ಬಂಧನಕ್ಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ರಾಜೀವ್ ಗೌಡನನ್ನು ಹಿಡಿದೇ ಹಿಡೀತಿವಿ ಅದರಲ್ಲಿ ಎರಡು ಮಾತೇ ಇಲ್ಲ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜೀವ್ ಗೌಡನನ್ನು ಹಿಡಿದೇ ಹಿಡೀತಿವಿ. ಸವಾಲೇನು ಇಲ್ಲ. ರಾಜೀವ್ ಗೌಡ ಎಷ್ಟು ದಿನ ತಪ್ಪಿಸಿಕೊಂಡು ಹೋಗೋಕೆ ಆಗುತ್ತೆ.? ಅವರೇನು ಇಲ್ಲೇ ಮನೆಯಲ್ಲಿ ಇದ್ದಾರಾ ಹಿಡಿದುಕೊಂಡು ಬರೋಕೆ ಎಂಬುದಾಗಿ ಪ್ರಶ್ನಿಸಿದರು.
ಒಂದೊಂದು ಕೇಸಲ್ಲೂ ಅದಕ್ಕೆ ಆದ ಆಯಾಮಗಳು ಇರುತ್ತದೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ದರೋಡೆ ಮಾಡಿದ್ರು. ದರೋಡೆಕೋರರನ್ನು ಬಂಧಿಸುತ್ತೇವೆ ಸಮಯ ಕೊಡಿ ಅಂದೆ. ಈಗ ಹಿಡಿದುಕೊಂಡು ಬಂದ್ರು. ಕಾನೂನು ಪ್ರಕಾರ ಕ್ರಮ ಕೈಗೊಳ್ತಾರೆ. ಅವರು ಕಳ್ಳತನ ಮಾಡಿರೋದ್ರಲ್ಲಿ ಅರ್ಧ ಸಿಕ್ಕಿದೆ. ಇನ್ನೂ ಉಳಿದ ಚಿನ್ನಾಭರಣಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಕೆಲವು ಆರೋಪಿಗಳು ನೇಪಾಳಕ್ಕೆ ಹೋಗಿದ್ದಾರೆ ಅನ್ನುವ ಸುದ್ದಿ ಇದೆ. ಅನೇಕ ವಿಷಯಗಳು ನನಗೆ ಗೊತ್ತಿದೆ. ನಾನು ಈಗ ಹೇಳುವುದಿಲ್ಲ ಎಂದರು.
BREAKING: ಉಡುಪಿ ಬಳಿಯ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಸಾವು








