BREAKING: ಉಡುಪಿ ಬಳಿಯ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಸಾವು

ಉಡುಪಿ: ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಒಂದು ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಉಡುಪಿ ತಾಲ್ಲೂಕಿನ ಕೋಡಿಬೆಂಗ್ರೆ ಬಳಿಯಲ್ಲಿ ಈ ದುರಂತ ಸಂಭವಿಸಿದೆ. ಬೋಟ್ ನಲ್ಲಿ ಶಂಕರಪ್ಪ (22), ಸಿಂಧು (23) ಸಾವನ್ನಪ್ಪಿದ್ದಾರೆ. ಧರ್ಮರಾಜ್ (26), ದಿಶಾ(26) ಎಂಬುವರ ಸ್ಧಿತಿ ಗಂಭೀರವಾಗಿದೆ. ಟೂರಿಸ್ಟ್ ಬೋಟ್ ನಲ್ಲಿ ಸಂಚಾರಕ್ಕೆ 15 ಪ್ರವಾಸಿಗರು ಹೋಗಿದ್ದರು. ಸಮುದ್ರ ಅಲೆಗೆ ಸಿಕ್ಕಿ ಟೂರಿಸ್ಟ್ ಬೋಟ್ ಮುಳುಗಿದೆ. ಅಸ್ವಸ್ಥರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.