ಬೆಂಗಳೂರು : 2028ಕ್ಕೆ ರಾಜ್ಯದಲ್ಲಿ ಎನ್ ಡಿ ಎ ಅಧಿಕಾರಕ್ಕೆ ಬರುತ್ತೆ ಎಂದು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಎಲ್ಲರೂ ಕನಸು ಕಾಣುತ್ತಾರೆ ನಾವು 2028ಕ್ಕೆ ನಮ್ಮದೇ ಸರ್ಕಾರ ಅಂತೀವಿ ಅದೇ ರೀತಿ ಬಿಜೆಪಿ ಜೆಡಿಎಸ್ ನವರು ಕನಸು ಕಾಣುತ್ತಿದ್ದಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದರು.
ಎಲ್ಲರಂತೆ ಬಿಜೆಪಿ ಮತ್ತು ಜೆಡಿಎಸ್ ನವರು 2028ಕ್ಕೆ ಸರ್ಕಾರ ಬರುತ್ತೆ ಅಂತ ಕನಸು ಕಾಣುತ್ತಿದ್ದಾರೆ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಅಧಿಕಾರಕ್ಕೆ ಬರುತ್ತಾರೆ. ನನ್ನ ಪ್ರಕಾರ 2028ಕ್ಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ನಮಗೆ ಮತ ಕೊಡುತ್ತಾರೆ.
ಬಿಜೆಪಿ ಅವಧಿಯಲ್ಲಿ ಎಷ್ಟು ಬಾರಿ ಸಿಎಂ ಬದಲಾವಣೆ ಆಯ್ತು ಜನರು ಇದೆಲ್ಲವನ್ನು ನೋಡಿದ್ದಾರೆ. ಬಿಜೆಪಿ ಆಡಳಿತವೇ ನೋಡಿ ಜನ ನಮಗೆ ಮೆಜಾರಿಟಿ ಕೊಟ್ಟರು. ಮುಂದೆಯೂ ಅದೇ ರೀತಿಯಲ್ಲಿ ನಮ್ಮದೇ ಸರ್ಕಾರ ಬರುತ್ತೆ ಎಂದು ಬೆಂಗಳೂರಿನ ಜಿಲ್ಲೆಯ ರಾಮನಗರದಲ್ಲಿ ರಾಮಲಿಂಗರೆಡ್ಡಿ ಹೇಳಿಕೆ ನೀಡಿದರು.








