ಆಂಧ್ರಪ್ರದೇಶ: ಪ್ರಿಯಕರನೊಬ್ಬ ಆಕೆಯನ್ನು ನಿರಾಕರಿಸಿದ್ದನು. ಆ ಬಳಿಕ ಬೇರೊಬ್ಬ ಯುವತಿಯೊಂದಿಗೆ ವಿವಾಹವಾಗಿದ್ದನು. ಪ್ರೀತಿ ವೈಫಲ್ಯದ ಕಾರಣಕ್ಕಾಗಿ ಪ್ರಿಯಕರನ ಮೇಲೆ ಆಕೆ ಸೇಡು ಮಸೆಯುತ್ತಿದ್ದಳು. ಇದೇ ಕಾರಣಕ್ಕೆ ಪ್ರಿಯಕರ ಪತ್ನಿಗೆ ಹೆಚ್ಐವಿ ಇಂಜೆಕ್ಷನ್ ನೀಡಿರುವಂತ ಶಾಕಿಂಗ್ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿ.ಬೋಯಾ ವಸುಂಧರಾ(34), ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಿ.ಬೋಯಾ ವಸುಂಧರಾ ಹಾಗೂ ಯುವಕನ ನಡುವೆ ಪ್ರೇಮ ವೈಫಲ್ಯ ಉಂಟಾಗಿತ್ತು. ಆ ಬಳಿಕ ಪ್ರಿಯಕರ ಕರ್ನೂಲ್ ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಂತ ಯುವತಿಯೊಬ್ಬಳನ್ನು ಮದುವೆಯಾಗಿದ್ದನು. ಇದೇ ಸಿಟ್ಟಿಗಾಗಿ ತನ್ನ ಮಾಜಿ ಪ್ರಿಯಕರನ ಪತ್ನಿಗೆ ಹೆಚ್ಐವಿ ಇಂಜೆಕ್ಷನ್ ನೀಡೋದಕ್ಕೆ ಬಿ.ಬೋಯಾ ವಸುಂಧರಾ ನಿರ್ಧರಿಸಿದ್ದಳು.
ಇದೇ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದಂತ ಕೊಂಗೆ ಜ್ಯೋತಿಯ ಸಹಾಯವನ್ನು ಪಡೆದು, ಸಂಶೋಧನೆ ಹೆಸರಿನಲ್ಲಿ ಹೆಚ್ಐವಿ ರೋಗಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಳು. ಅದನ್ನು ಕೊಂಡೊಯ್ದು ಮನೆಯಲ್ಲಿನ ಫ್ರಿಡ್ಜ್ ನಲ್ಲಿ ಇರಿಸಿದ್ದಳು. ಪ್ರಿಯಕರನ ಪತ್ನಿಗೆ ಆ ರಕ್ತವನ್ನು ಇಂಜೆಕ್ಷನ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಳು.
ಜನವರಿ.9ರಂದು ಮಾಜಿ ಪ್ರಿಯಕರನ ಪತ್ನಿ ಕರ್ನೂಲ್ ನ ಖಾಸಗಿ ವೈದ್ಯಕೀಯ ಕಾಲೇಜಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಬೈಕ್ ನಿಂದ ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ಬಳಿಕ ಆಕೆಯನ್ನು ಸಂತೈಸೋ ನೆಪದಲ್ಲಿ ಬಂದಂತ ವಸುಂಧರಾ ಅವರನ್ನು, ಆಟೋ ರಿಕ್ಷಾಕ್ಕೆ ಹತ್ತಿಸುವ ನಾಟಕವಾಡಿ ಅವರಿಗೆ ಹೆಚ್ಐವಿ ಇಂಜೆಕ್ಷನ್ ಚುಚ್ಚಿದ್ದಳು. ಸಂತ್ರಸ್ತೆ ಕಿರುಚಿಕೊಂಡಾಗ ಅಲ್ಲಿಂದ ಪರಾರಿಯಾಗಿದ್ದಳು.
ಈ ಸಂಬಂಧ ಸಂತ್ರಸ್ತ ಮಹಿಳೆಯ ಪತಿ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಬಿ.ಬೋಯಾ ವಸುಂಧರಾ ಅವರು ಸೇಡು ತೀರಿಸಿಕೊಳ್ಳಲು ಹೆಚ್ಐವಿ ಇಂಜೆಕ್ಷನ್ ಚುಚ್ಚಿರೋದು ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ ಕಾರಣ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದರಿಂದ ಹೆಚ್ಐವಿ ಸೋಂಕಿನ ಭಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೇ ಹೆಚ್ಐವಿ ರೋಗಿಯ ದೇಹದಿಂದ ರಕ್ತ ಪಡೆದು ಫ್ರಿಡ್ಜ್ ನಲ್ಲಿ ಇರಿಸಿದ್ದರು, ಹೆಚ್ಐವಿ ವೈರಸ್ ಹೆಚ್ಚು ದಿನ ಉಳಿಯೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.
ಈ ರೀತಿಯಾಗಿ ವಸುಂಧರಾ ತನ್ನ ಮಾಜಿ ಪ್ರೇಮಿಯು ಮತ್ತೋರ್ವ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾಗದೇ ಎಸಗಿದಂತ ಕೃತ್ಯದ ವಿರುದ್ಧ ಕೇಸ್ ದಾಖಲಿಸಿ ಆಕೆಗೆ ಸಹಾಯ ಮಾಡಿದ ಆಸ್ಪತ್ರೆ ನರ್ಸ್, ಆಕೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇಂದು ದೇಶವನ್ನುದ್ದೇಶಿಸಿ 77ನೇ ಗಣರಾಜ್ಯೋತ್ಸವ ಮುನ್ನಾದಿನ ರಾಷ್ಟ್ರಪತಿ ಮುರ್ಮು ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ
Watch Video: ರಾಜ್ಯದಲ್ಲಿ ಮತ್ತೊಂದು ಖಾಸಗಿ ಬಸ್ ಅಗ್ನಿ ಅವಘಡ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು








