ಬೆಂಗಳೂರು : ಬೆಂಗಳೂರಿನ ವಾಹನ ಸವಾರರೇ ಗಮನಿಸಿ, ಇಂದಿನಿಂದ 3 ದಿನ ನಗರದ ಈ ಪ್ರದೇಶಗಳಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ದಿನಾಂಕ: 25.01.2026 ರಿಂದ ದಿನಾಂಕ: 27.01.2026 ರವರೆಗೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರಿನಲ್ಲಿ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು :
* ಗುಂಜೂರಿನಿಂದ ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರದ ಮೂಲಕ ಸೂರಹುಣಸೆ ಮತ್ತು ವಾಲೇಪುರ ಮೂಲಕ ಹಾಗೂ ವರ್ತೂರು ಕಾಲೇಜು ಮೂಲಕ ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದಾಗಿದೆ.
* ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಸಂಚರಿಸುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ ಸೂರಹುಣಸೆ ರಸ್ತೆಯಿಂದ ಮಧುರನಗರದ ಮೂಲಕ ಹಲಸಹಳ್ಳಿ ಗುಂಜೂರು ಕಡೆಗೆ ಹಾಗೂ ವರ್ತೂರು ಪೊಲೀಸ್ ಠಾಣೆ ಕಡೆಯಿಂದ ಸಂಚರಿಸಬಹುದಾಗಿದೆ.
* ಗುಂಜೂರು ಕಡೆಯಿಂದ ಕುಂದಲಹಳ್ಳಿ ಮತ್ತು ಮಾರತಹಳ್ಳಿ ಕಡೆಗೆ ಸಂಚರಿಸುವ ಲಘುವಾಹನಗಳು ಗುಂಜೂರು ಕೆ.ಎಫ್.ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮೂಲಕ ಹಾಗೂ ವಿಬ್‌ಗಯಾರ್ ಕಡೆಯಿಂದ ಸಂಚರಿಸಬಹುದಾಗಿದೆ.
HGV ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು :
* ಹೊಸಕೋಟೆಯಿಂದ ಬರುವ ಎಲ್ಲಾ HGV ವಾಹನಗಳು ಕಡ್ಡಾಯವಾಗಿ ಹೋಪ್ ಫಾರ್ಮ್ನನಲ್ಲಿ ಎಡಕ್ಕೆ ತೆಗೆದುಕೊಂಡು ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಂಚರಿಸಬಹುದಾಗಿದೆ.
* ಹೆಚ್.ಎ.ಎಲ್ ಓಲ್ಡ್ ಏರ್‌ಪೋರ್ಟ್ ಮಾರ್ಗವಾಗಿ ಬರುವ ಎಲ್ಲಾ HGV ವಾಹನಗಳು ಕಡ್ಡಾಯವಾಗಿ ವರ್ತೂರು ಕೋಡಿ, ಹೋಪ್ ಫಾರ್ಮ್, ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಂಚರಿಸಬಹುದಾಗಿದೆ.
* ಸರ್ಜಾಪುರದಿಂದ ಬರುವ ಎಲ್ಲಾ HGV ವಾಹನಗಳು ಚಿಕ್ಕತಿರುಪತಿ, ದೊಮ್ಮಸಂದ್ರ, ಕೊಡತಿ, ಬೆಳ್ಳಂದೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.
* ಬೆಳ್ಳಂದೂರು ಮಾರ್ಗವಾಗಿ ಬರುವ HGV ವಾಹನಗಳು ಕೊಡತಿ, ದೊಮ್ಮಸಂದ್ರ ಮಾರ್ಗವಾಗಿ ಸಂಚರಿಸಬಹುದಾಗಿದೆ.
* ಗುಂಜೂರು ಬಿ.ಎಂ.ಟಿ.ಸಿ ಡಿಪೋ-41 ಯಿಂದ ಗುಂಜೂರು ವರ್ತೂರು ಕಡೆಗೆ ಹೋಗುವ ಬಸ್ಸುಗಳು ನೆರಿಗೆ ರಸ್ತೆಯನ್ನು ಬಳಸಿ ಹೊಸಹಳ್ಳಿ ಮಾರ್ಗವಾಗಿ ಮದುರನಗರ ಕಡೆಯಿಂದ ವರ್ತೂರಿನ ಮಾರ್ಗವಾಗಿ ಸಂಚರಿಸಬಹುದಾಗಿದೆ.










