ಕೋಲಾರ: ಜಿಲ್ಲೆಯಿಂದ ಶಬರಿಮಲೆಗೆಂದು ಪ್ರವಾಸಕ್ಕೆ ತೆರಳಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವಂತ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿಯ ರವಿ(40) ಎಂಬಾತನೇ ಶಬರಿಮಲೆಗೆಂದು ಹೋಗಿ ನಾಪತ್ತೆಯಾಗಿರುವಂತ ವ್ಯಕ್ತಿಯಾಗಿದ್ದಾರೆ. ಶಬರಿಮಲೆಗೆ ತೆರಳಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಬಳಿಕ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ಅಲ್ಲಿಂದ ಇದ್ದಕ್ಕಿಂದ್ದಂತೆ ರವಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ತಿರುಚಂದೂರ್ ಗೆ ತೆರಳಿದ್ದಂತ ರವಿ ಕಾಣಿಸುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು, ತಿರುಚಂದೂರ್ ಪೊಲೀಸ್ ಠಾಣೆಗೆ ತೆರಳಿ ರವಿ ನಾಪತ್ತೆಯ ಬಗ್ಗೆ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವಂತ ತಿರುಚಂದೂರ್ ಠಾಣೆಯ ಪೊಲೀಸರು ರವಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಅರ್ಧ ಕೇಜಿಯಷ್ಟು ತೂಕದ ಲೋಹದ ವಸ್ತು ಪತ್ತೆ
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








