ಬೆಂಗಳೂರು : ನಗರದಲ್ಲಿ ಇ-ಖಾತಾಗಾಗಿ ಜಿಬಿಎ ಕಚೇರಿಗೆ ಹೋಗೋ ಅವಶ್ಯಕತೆಯಿಲ್ಲ, ಬ್ರೋಕರ್ ಗಳಿಗೆ ದುಡ್ಡು ಕೊಡೋದು ಬೇಕಿಲ್ಲ. ಜಸ್ಟ್ ಮನೆಯಲ್ಲೇ ಕುಳಿತು ಹೀಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಇ-ಖಾತಾ ಪಡೆಯಿರಿ ಎಂಬುದಾಗಿ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಇ-ಖಾತಾ(eKhata) ಅರ್ಜಿಗಳ ವಿಲೇವಾರಿಯಲ್ಲಿ 99.36% ಸಾಧನೆ ಮುಂದುವರೆದಿದೆ. ನಾಗರಿಕರು ಅರ್ಜಿ ಸಲ್ಲಿಸಿದ ನಂತರ 1–2 ದಿನಗಳೊಳಗೆ ಇ-ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ವತಿಯಿಂದ ಎಲ್ಲಾ ನಾಗರಿಕರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಅರ್ಜಿಯನ್ನು ಈ ಕೆಳಗಿನ ಮಾರ್ಗಗಳ ಮೂಲಕ ಸಲ್ಲಿಸಬಹುದು:
• ವೆಬ್‌ಸೈಟ್: https://bbmpeaasthi.karnataka.gov.in
• ಬೆಂಗಳೂರು ಒನ್ ಕೇಂದ್ರಗಳು
• ಸ್ಥಳೀಯ ಖಾಸಗಿ ಉದ್ಯಮಿಗಳು(LPE) – ನಿಮ್ಮ ಹತ್ತಿರದ LPE ವಿವರಗಳನ್ನು ಮೇಲ್ಕಂಡ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು
ದಯವಿಟ್ಟು ಯಾವುದೇ ನಗರ ಪಾಲಿಕೆ ಅಥವಾ GBA ಕಚೇರಿಗಳಿಗೆ ಭೇಟಿ ನೀಡಬೇಡಿ.
ಮಧ್ಯವರ್ತಿಗಳಿಗೆ ಲಂಚ ಅಥವಾ ಯಾವುದೇ ಹಣ ನೀಡಬೇಡಿ.
ಸಾಮಾನ್ಯವಾಗಿ 3–4 ದಿನಗಳಲ್ಲಿ ಇ-ಖಾತಾ ಅನುಮೋದನೆ ದೊರೆಯುತ್ತದೆ. ಆದರೆ ಮ್ಯೂಟೇಶನ್ ಅಥವಾ ತಿದ್ದುಪಡಿ ಅಗತ್ಯವಿರುವ ಪ್ರಕರಣಗಳಲ್ಲಿ 10–15 ದಿನಗಳು ಹಿಡಿಯಬಹುದು.
ಇ-ಖಾತಾ ಸಹಾಯವಾಣಿ (Helpline): 94806 83695
ಇ-ಖಾತಾ ಸ್ಥಿತಿ ಪರಿಶೀಲನೆ:
https://bbmpeaasthi.karnataka.gov.in/citizen_core/Final_eKhatha_Status_based_on_ePID
ಪದೇಪದೇ ಕೇಳುವ ಪ್ರಶ್ನೆಗಳು (FAQs):
https://bbmpeaasthi.karnataka.gov.in/subpage.html?sid=U2FsdGVkX1%2BWw3w1xmXXcdfXaKbwZgDi%2FzpquzY0OdM%3D
ವೀಡಿಯೋ ಮಾರ್ಗದರ್ಶಿಗಳು:
https://bbmpeaasthi.karnataka.gov.in/subpage.html?sid=U2FsdGVkX1%2FpV6QS9h4OMQj2PT04ZuyeNrGYFceQ3ME%3D
ಸದನದಲ್ಲಿನ ಗೂಂಡಾಗಿರಿ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ








