ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ ರೈತರ ಹಿತದೃಷ್ಟಿಯಿಂದ ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕಿಸಾನ್ ಮಾಲ್‍ನ್ನು ಧಾರವಾಡ ಕುಂಬಾಪುರ ಫಾರ್ಮದ ಆವರಣದಲ್ಲಿರುವ ತರಕಾರಿ ಬೆಳೆಗಳ ಉತ್ಕಂಷ್ಟ ಕೇಂದ್ರದಲ್ಲಿ ಸ್ಥಾಪಿಸಿದೆ.
ಕಿಸಾನ್ ಮಾಲ್‍ನಲ್ಲಿ ತೋಟಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅವಶ್ಯಕವಾಗಿರುವ ಬೀಜ, ರಸಗೊಬ್ಬರಗಳು, ಸಾವಯವಗೊಬ್ಬರಗಳು, ನೀರಾವರಿ ಹಾಗೂ ಕೃಷಿ ಯಂತ್ರೋಪಕರಣಗಳು, ಸಲಕರಣೆಗಳು ಹಾಗೂ ಎಲ್ಲ ರೀತಿಯ ಶಿಲೀಂದ್ರ ಹಾಗೂ ಕೀಟನಾಶಕಗಳು ಎಲ್ಲವೂ ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.
ಎಲ್ಲ ರೈತ ಬಾಂಧವರು ಕಿಸಾನ್ ಮಾಲ್‍ನ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ದೂರವಾಣಿ ಸಂಖ್ಯೆ: 9110857484 ಗೆ ಸಂಪರ್ಕಿಸಬಹುದು ಎಂದು ತರಕಾರಿ ಬೆಳಗಳ ಉತ್ಕಂಷ್ಟ ಕೇಂದ್ರದ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








