ಬೆಂಗಳೂರು: ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲ, ಅವರು ರಾಜ್ಯದ ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರು ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ಬರೆದುಕೊಟ್ಟ ಭಾಷಣ ಮಾಡುವುದು ರಾಜ್ಯಪಾಲರ ಸಂವಿಧಾನಬದ್ಧವಾದ ಜವಾಬ್ದಾರಿ ಆಗಿದೆಯೇ ಹೊರತು, ಅದೇನು ಸರ್ಕಾರಕ್ಕೆ ಮಾಡುವ ಉಪಕಾರವಲ್ಲ ಎಂಬುದಾಗಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ವಿಧಾನಮಂಡಲದ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ‘ರಾಜ್ಯ ಸಚಿವ ಸಂಪುಟ’ ಒದಗಿಸುತ್ತದೆ. ಆ ಭಾ಼ಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ದನಿ ಎತ್ತಲಾಗಿದೆ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಆ ಭಾಷಣವನ್ನು ನಿರಾಕರಿಸುವಂತಿಲ್ಲ. ಕೇಂದ್ರದ ಜನವಿರೋಧಿ ಯೋಜನೆಗಳನ್ನು ಅಧಿವೇಶನದಲ್ಲಿ ಚರ್ಚಿಸುವುದು ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಅದು ರಾಜ್ಯ ಸರ್ಕಾರಗಳ ಹಕ್ಕು ಮತ್ತು ಜವಾಬ್ದಾರಿ ಆಗಿದೆ. ಬಹುಕಾಲದಿಂದಲೂ ಇದು ಅಸ್ತಿತ್ವದಲ್ಲಿರುವ ವಿದ್ಯಮಾನ ಆಗಿದೆ ಎಂದಿದ್ದಾರೆ.
ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಾಗಿ ವರ್ತಿಸದೇ ತಮ್ಮ ರಾಜ್ಯಪಾಲರ ಜವಾಬ್ದಾರಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದು ಜನ ಸಾಮಾನ್ಯರ ಬದುಕಿನ ದೃಷ್ಟಿಯಿಂದ ಹೆಚ್ಚು ಉತ್ತಮ ಎನಿಸಿಕೊಳ್ಳುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ‘ವೈದ್ಯಕೀಯ ಅಭ್ಯರ್ಥಿಗಳ ಕಡ್ಡಾಯ ಸೇವಾ ಕಾಯ್ದೆ 2012’ರ ಬಗ್ಗೆ ಮಹತ್ವದ ಮಾಹಿತಿ
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








