ಹಾಸನ: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಶಾಲಾ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಂತ ಕಿಡಿಗೇಡಿಯೊಬ್ಬ, ಕೀಟಲೆ ಮೆರೆದಿರೋದು ಪೋಷಕರನ್ನು ಆತಂಕಕ್ಕೆ ದೂಡುವಂತೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ.17ರಂದು ನಡೆದಿರುವಂತ ಘಟನೆ ಇದಾಗಿದೆ. 80 ಅಡಿ ರಸ್ತೆಯಲ್ಲಿದ್ದಂತ ಮನೆಯೊಂದರ ಬಳಿಯಲ್ಲಿ ಬಾಲಕಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದಂತ ಕಿಡಿಗೇಡಿಯೊಬ್ಬ, ಕೀಟಲೆ ಮೆರೆದಿರೋದು ಬೆಚ್ಚಿ ಬೀಳುವಂತೆ ಮಾಡಿದೆ.
ಶನಿವಾರದಂದು ಶಾಲೆ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದಂತ 9ನೇ ತರಗತಿ ಬಾಲಕಿ ಇನ್ನೇನು ಮನೆ ಬಂತಲ್ಲ ಎನ್ನುವಾಗಲೇ ಗೇಟ್ ತೆಗೆದು ಓಡ ಹೋದರೂ ಬಿಡದೇ, ಗೇಟ್ ಬಳಿಯಲ್ಲಿ ಕಿಡಿಗೇಡಿಯೊಬ್ಬ ಇಣುಕಿ ನೋಡಿ ಕೆಲಕಾಲ ಆತಂಕ ಸೃಷ್ಠಿಸಿದ್ದಾನೆ. ಬಾಲಕಿ ಅಮ್ಮಾ ಬಾಗಿಲು ತೆಗೆ ಎಂಬುದಾಗಿ ಕಿರುಚುತ್ತಲೇ ಒಳಗೆ ಓಡಿ ಹೋಗಿರೋದಾಗಿ ಹೇಳಲಾಗುತ್ತಿದೆ.
ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಕಿಡಿಗೇಡಿ ಆತಂಕ ಸೃಷ್ಠಿಸಿದಂತ ದೃಶ್ಯ ಮನೆಯಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪೋಷಕರು ದೂರು ನೀಡಿದ್ದು, ಕಿಡಿಗೇಡಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.








