ಬೆಂಗಳೂರು: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಗಲಾಟೆಯ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚೆತ್ತುಕೊಂಡಿದೆ. ಬೆಂಗಳೂರಿನ ವಿವಿಧೆಡೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದಂತ ಬ್ಯಾನರ್, ಫ್ಲೆಕ್ಸ್ ಗಳನ್ನು ತೆರವುಗೊಳಿಸಿದೆ.
ಅನಧಿಕೃತ/ ಪರವಾನಿಗೆ ಪಡೆಯದೆ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಗಳ ವಿರುದ್ಧ ಸದಾ ಸಮರೋಪಾದಿಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರು ಕಾರ್ಯನಿರ್ವಹಿಸುತ್ತಿದ್ದು ಇದರ ಭಾಗವಾಗಿ ಒಂದೇ ದಿನ ದಾಖಲೆಯ 473 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಗಳನ್ನು ತೆರವುಗೊಳಿಸಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ಸೂಚನೆಯಂತೆ ಸ್ವಚ್ಛ ಮತ್ತು ಸುಂದರವಾಗಿ ಕಾಪಾಡಲು ಸೋಮವಾರ ಒಂದೇ ದಿನ ಅವಿರತವಾಗಿ ಶ್ರಮಿಸಿ ದಾಖಲೆಯ 473 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಗಳನ್ನು ಪಾಲಿಕೆಯ ಅಧಿಕಾರಿಗಳ ಮತ್ತು ನೌಕರರ ತಂಡ ತೆರವು ಕಾರ್ಯಾಚರಣೆಯನ್ನು ನಡೆಸಿದೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೊಡಿಗೆಹಳ್ಳಿಯಲ್ಲಿ ಅತಿ ಹೆಚ್ಚು 280 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಗಳನ್ನು ತೆರವುಗೊಳಿಸಲಾಗಿದೆ. ಉಳಿದಂತೆ ಟಿ ದಾಸರಹಳ್ಳಿಯಲ್ಲಿ 54, ಥಣಿಸಂದ್ರದಲ್ಲಿ 45, ಜಕ್ಕೂರಿನಲ್ಲಿ 38, ಅಟ್ಟೂರಿನಲ್ಲಿ 35, ಯಲಹಂಕ ಸ್ಯಾಟಲೈಟ್ ಟೌನ್ ನಲ್ಲಿ 21 ಸೇರಿ ಒಟ್ಟು ಎಲ್ಲ ವಾರ್ಡ್ ಗಳ ವ್ಯಾಪ್ತಿಯಲ್ಲಿ 473 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಗಳನ್ನು ತೆರವುಗೊಳಿಸಿ ದಾಖಲೆ ನಿರ್ಮಿಸಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಹೊರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ತೆರವು
ಒಂದೇ ದಿನದಲ್ಲಿ ಪಾದಚಾರಿ ಮೇಲ್ಸೇತುವೆ ಹಾಗೂ ಬಸ್ ತಂಗುದಾಣಗಳಿಗೆ ಅಳವಡಿಸಿದ್ದ 51 ಕ್ಕೂ ಹೆಚ್ಚು ಹೋರ್ಡಿಂಗ್ಸ್ ತೆರವುಗೊಳಿಸಲಾಗಿದೆ. ಪಾದಚಾರಿ ಮೇಲ್ಸೆತುವೆಗಳಿಗೆ (ಸ್ಕೈವಾಕ್) ಅಳವಡಿಸಿದ್ದ 8 ಹೋರ್ಡಿಂಗ್ಸ್ ಮತ್ತು ಬಸ್ ತಂಗುದಾಣಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ 43 ಹೋರ್ಡಿಂಗ್ಸ್ ತೆರವು ಮಾಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರ ಆದೇಶದಂತೆ ಇಂದು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 5 ವಿಭಾಗಗಳಲ್ಲಿ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ಹಾಗೂ ಬಸ್ ತಂಗುದಾಣಗಳಿಗೆ (ಬಸ್ ಶೆಲ್ಟರ್) ಅನಧಿಕೃತವಾಗಿ ಅಳವಡಿಸಿದ್ದ ಸುಮಾರು 51 ಕ್ಕೂ ಅಧಿಕ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು ತಿಳಿಸಿದ್ದಾರೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 5 ವಿಭಾಗಗಳಲ್ಲಿ ಇಂದು ಬೆಳಿಗ್ಗೆ ಯಿಂದ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ಹಾಗೂ ಬಸ್ ತಂಗುದಾಣಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ವಿಭಾಗಗವಾರು ತೆರವುಗೊಳಿಸಿದ ಹೋರ್ಡಿಂಗ್ಸ್ ವಿವರ:
(1) ಶಾಂತಿನಗರ ವಿಭಾಗದಲ್ಲಿ – 7 ಹೋರ್ಡಿಂಗ್ಸ್
(2) ಸಿ.ವಿ. ರಾಮನ್ ನಗರದಲ್ಲಿ – 6 ಹೋರ್ಡಿಂಗ್ಸ್
(3) ಶಿವಾಜಿನಗರದಲ್ಲಿ – 13 ಹೋರ್ಡಿಂಗ್ಸ್
(4) ಚಿಕ್ಕಪೇಟೆಯಲ್ಲಿ – 22 ಹೋರ್ಡಿಂಗ್ಸ್
(5) ಗಾಂಧಿನಗರದಲ್ಲಿ – 3 ಹೋರ್ಡಿಂಗ್ಸ್
ನಿರಂತರ ಅಭಿಯಾನ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಫ್ಲೆಕ್ಸ್, ಬ್ಯಾನರ್, ಹೊರ್ಡಿಂಗ್ಸ್ ಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು, ಸಂಸ್ಥೆಗಳು ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ಅಳವಡಿಸದಂತೆ ಈ ಮೂಲಕ ಸೂಚನೆ ನೀಡಲಾಗಿದೆ.
ಅನಧಿಕೃತ ಹೊರ್ಡಿಂಗ್ಸ್ ತೆರವು ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಇಂಜಿನೀಯರ್ ಗಳು, ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಗಳು, ಜಾಹೀರಾತು ಸಹ ಕಂದಾಯ ಅಧಿಕಾರಿ, ಇತರೆ ಸ್ವಚ್ಛತಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಶಾಮನೂರು ನಂತ್ರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ: ಬಿವೈ ವಿಜಯೇಂದ್ರ ಅಭಿನಂದನೆ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಕಲ್ಲಿನಿಂದ ಜಜ್ಜಿ ಗಾಯ







