ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆ ನಿಯಂತ್ರಣಕ್ಕೆ ಸ್ವತಹ ಜೆಡಿಎಸ್ ಶಾಸಕಿಯೊಬ್ಬರೇ ಇಳಿದಿದ್ದರು. ಆದರೇ ಹೀಗೆ ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದಂತ ಶಾಸಕಿ ಮನೆಗೆ ನುಗ್ಗಿ, ಧಮ್ಕಿ ಹಾಕಿರುವಂತ ಘಟನೆ ದೇವದುರ್ಗದಲ್ಲಿ ನಡೆದಿದೆ.
ರಾಯಚೂರಿನ ದೇವದುರ್ಗದ ಜೆಡಿಎಸ್ ಶಾಸಕಿ ಕೆರಮ್ಮ ನಾಯಕ್ ಅವರು ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದರು. ಇದರಿಂದ ಸಿಟ್ಟಾದಂತ ಮರಳು ದಂಧೆ ಕೋರರರು ಅವರ ಮನೆಗೆ ನುಗ್ಗಿ ಧಮ್ಕಿ ಹಾಕಿರುವಂತ ಆರೋಪ ಕೇಳಿ ಬಂದಿದೆ.
ದೇವದುರ್ಗದ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದಂತ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಕ್ಕೆ ಶಾಸಕಿ ಕೆರೆಮ್ಮ ಸೂಚಿಸಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವತಹ ಶಾಸಕಿ ಕೆರೆಮ್ಮ ಅವರೇ ದೇವದುರ್ಗ ಪೊಲೀಸ್ ಠಾಣೆಗೆ ತೆರಳಿ ಧಮ್ಕಿ ಹಾಕಿದಂತ 60ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿದೆ.
ಧರ್ಮಸ್ಥಳ ಬುರುಡೆ ಕೇಸ್: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSL ಪರೀಕ್ಷೆಗೆ ರವಾನೆ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಕಲ್ಲಿನಿಂದ ಜಜ್ಜಿ ಗಾಯ








