ಬೆಳಗಾವಿ : ಅಕ್ಕನ ಮೇಲೆ ಕಣ್ಣು ಹಾಕಿದ ದೇವಸ್ಥಾನದ ಪೂಜಾರಿಯನ್ನು ಅಪ್ರಾಪ್ತ ಬಾಲಕ ಒಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನೆಡೆದಿದೆ.
ರಾಜಾಪುರ ಗ್ರಾಮದ ಮಂಜುನಾಥ್ ಸುಭಾಷ್ ಎಣ್ಣಿ (23) ಭೀಕರವಾಗಿ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. 17 ವರ್ಷದ ಅಪ್ರಾಪ್ತ ಬಾಲಕನಿಂದ ಮಂಜುನಾಥ್ ಎಣ್ಣಿ ಕೊಲೆಯಾಗಿದೆ. ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಅಕ್ಕನ ತಂಟೆಗೆ ಬರದಂತೆ ಬಾಲಕ ಕೆಲವು ಬಾರಿ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ.
ಆದರೂ ಪೂಜಾರಿ ಮಂಜುನಾಥ ಅಪ್ರಾಪ್ತಿ ತಂಟೆಗೆ ಹೋಗುತ್ತಿದ್ದ. ಅಕ್ಕನ ಮೇಲೆ ಕಣ್ಣು ಹಾಕಿದವನನ್ನು ಇದೀಗ ಬಾಲಕ ಭೀಕರವಾಗಿ ಕೊಲೆ ಮಾಡಿದ್ದಾನೆ. ಚೂನಮ್ಮದೇವಿ ದೇವಸ್ಥಾನದ ಪೂಜಾರಿಯಾಗಿದ್ದ ಮಂಜುನಾಥ್, ದೇವಸ್ಥಾನದಲ್ಲಿ ಯಾರು ಇಲ್ಲದನ್ನು ನೋಡಿ ಮಂಜುನಾಥನನ್ನು ಬಾಲಕ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








