ಪೆದ್ದ “ಯಂಕನ” ಮುಗ್ಧ ಭಕ್ತಿ
ಒಂದು ಗ್ರಾಮದಲ್ಲಿ ವೆಂಕಣ್ಣ ಎಂಬ ಯುವಕನಿದ್ದ. ಬರ ಬರುತ್ತಾ ಅವನ ಹೆಸರು ಗ್ರಾಮದವರ ಬಾಯಲ್ಲಿ “ಯಂಕ” ಆಯಿತು. ಅನಾಥನಾಗಿ ಬೆಳೆದವನು. ಶಾಲೆ ಹತ್ತಿದವನಲ್ಲ, ಹೀಗೆ ಮಾಡು ಎಂದು ಹೇಳುವವರಿಲ್ಲ. ಊರವರ ಜಮೀನಿನಲ್ಲಿ ಕೆಲಸ ಮಾಡಿ, ಊರವರು ಕೊಟ್ಟಿದ್ದನ್ನು ತಿಂದುಕೊಂಡು ಆ ಮಕ್ಕಳ ಜೊತೆ ಬೆಳೆದು, ತಿಳಿದುಕೊಂಡಿದ್ದು ಎಷ್ಟೋ ಅಷ್ಟೇ. ಅವನಿಗೆ ಬಂಧು-ಬಳಗ ಹಿಂದಿಲ್ಲ -ಮುಂದಿಲ್ಲ. ಅವನ ಒಳ್ಳೆತನ ನೋಡಿ ಯಾರೋ ಸಾಹುಕಾರ ನೊಬ್ಬ ಅವನ ಸ್ವಂತಕ್ಕೆ ಸ್ವಲ್ಪ ಜಮೀನು ಕೊಟ್ಟರು. ಅಂದಿನಿಂದ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡದೆ ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಅವನು ಮುಗ್ಧ- ಪೆದ್ದ- ಒಳ್ಳೆಯವನು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ಯಂಕ ನಿತ್ಯವೂ ಓಡಾಡುವ ದಾರಿಯಲ್ಲಿ ಊರ ದೇವಸ್ಥಾನ ಇತ್ತು ಅದೂಂದು ದಿನ ದೇವಸ್ಥಾನದಲ್ಲಿ ತುಂಬಾ ಜನ ಸೇರಿದ್ದನ್ನು ಕಂಡು ಅವನು ದೇವಸ್ಥಾನಕ್ಕೆ ಬಂದ. ಎಲ್ಲರೂ ದೇವರ ಮುಂದೆ ಕೈ ಮುಗಿದು ಭಕ್ತಿಯಿಂದ ಬಾಯಲ್ಲಿ ಕುಣು, ಕುಣು, ಎಂದು ಏನೋ ಹೇಳುತ್ತಿದ್ದರು. ಅದನ್ನೆಲ್ಲ ನೋಡಿ ಪ್ರಸಾದ ತೆಗೆದುಕೊಂಡು ಬರುತ್ತಿರುವಾಗ ಅವನಿಗೆ ಅನ್ನಿಸಿತು. ನಾನು ದೇವರ ಸ್ಮರಣೆ ಮಾಡಬೇಕು. ದೇವರಲ್ಲಿ ಬೇಡಿ ಕೊಳ್ಳುವುದು ಏನೋ ಒಳ್ಳೆಯದಕ್ಕೆ ಇರಬೇಕು ಎಂದುಕೊಂಡ. ಆದರೆ ಅವನಿಗೆ ಯಾವ ದೇವರ ಹೆಸರಾಗಲಿ, ಸ್ಮರಣೆ ಮಾಡುವುದಾಗಲಿ ಹೇಗೆ ? ಏನು ಒಂದೂ ಗೊತ್ತಿಲ್ಲ. ಹೀಗೆ ಯೋಚಿಸುತ್ತಾ, ಊರ ಹೊರ ಭಾಗದಲ್ಲಿ ಕುಳಿತಿದ್ದ ಒಬ್ಬ ಸನ್ಯಾಸಿಯನ್ನು ನೋಡಿದ ಯಂಕ ಅವನ ಬಳಿ ಹೋಗಿ ನಮಸ್ಕರಿಸಿ ಸ್ವಾಮಿ ನಾನು ಯಾವುದಾದರೂ ಭಗವಂತನ ಹೆಸರನ್ನು ಹೇಳಿಕೊಂಡು ದಿನ ರಾತ್ರಿ ಪೂರ್ತಿ ಕೆಲಸಗಳನ್ನು ಮಾಡಬೇಕು. ಇದರಿಂದ ದೇವರ ಬಗ್ಗೆ ತಿಳಿದುಕೊಳ್ಳಬಹುದು. ನನಗೊ ಒಂದು ದೇವರ ಹೆಸರನ್ನು ತಿಳಿಸುವಿರಾ ಎಂದನು.
ಆ ಸನ್ಯಾಸಿಯು “ಅಘ್ಮೋಚನ್” ಇದನ್ನು ದಿನ ಹೇಳಿಕೊಂಡು ಕೆಲಸ ಮಾಡು ಎಂದನು. ಸಾಧುಗಳು ಹೇಳಿದ ಹೆಸರನ್ನು ಅಘ್ಮೋಚನ್, ಅಘ್ಮೋಚನ್ (ಅಜ್ಞಾನವನ್ನು ಮೋಕ್ಷ ಮಾಡುವವನು) ಎಂಬ ಹೆಸರನ್ನು ರಸ್ತೆ ಉದ್ದಕ್ಕೂ ಹೇಳಿ ಕೊಳ್ಳುತ್ತಾ ಹೊರಟನು. ಮನೆಗೆ ಬಂದ ಮೇಲೂ ಹೇಳುತ್ತಿದ್ದ. ಆದರೆ ಅವನಿಗೆ ಬುದ್ಧಿ ತುಂಬಾ ಕಡಿಮೆ ಇದ್ದುದರಿಂದ ಏನೋ ಮಾಡುವಾಗ ಹೆಸರು ಮರೆತು ಹೋಯಿತು. ಯೋಚಿಸಿ ಕಷ್ಟಪಟ್ಟು ನೆನಪಿಸಿಕೊಂಡರೂ ‘ಅ’ ಮರೆತು ಹೋಗಿ, ಅದು ಘಮೋಚನ್, ಘಮೋಚನ್, ಆಯಿತು. ಅಂದಿನಿಂದ ಇದನ್ನೇ ದಿನ-ರಾತ್ರಿ ಹೇಳಿಕೊಳ್ಳುತ್ತಾ, ಕೆಲಸ ಮಾಡುತ್ತಿದ್ದ. ಮಲಗುವಾಗಲೂ ಹೇಳಿಕೊಂಡು ನಿದ್ರೆ ಬರುವವರೆಗೂ ಸ್ಮರಿಸುತ್ತಿದ್ದನು.
ಒಂದು ದಿನ ವೈಕುಂಠದಲ್ಲಿ ಶೇಷನಾಗನ ಮೇಲೆ ಕುಳಿತಿದ್ದ ಶ್ರೀಹರಿಯು ಒಂದೇ ಸಮ ನಗುತ್ತಲೇ ಇದ್ದನು. ಅವನ ಮಗ್ಗುಲಲ್ಲೇ ಕುಳಿತಿದ್ದ ಲಕ್ಷ್ಮಿಯು ಏನು ಸ್ವಾಮಿ, ಆವಾಗಿನಿಂದ ನಗುತ್ತಿದ್ದೀರಲ್ಲ ಏಕೆ ಎಂದು ಕೇಳಿದಳು. ವಿಷ್ಣು ಹೇಳಿದ, ಭೂಮಿ ಮೇಲೆ ನನ್ನ ಭಕ್ತನೊಬ್ಬನಿದ್ದಾನೆ. ಅವನು ನನ್ನ ಹೆಸರನ್ನು ಹೇಳಿ ಸ್ಮರಣೆ ಮಾಡುತ್ತಿದ್ದಾನೆ. ಆದರೆ ಅವನು ಹೇಳುವ ಹೆಸರು ಯಾವ ವೇದ, ಪುರಾಣಗಳಲ್ಲೂ ಉಲ್ಲೇಖವಾಗಿಲ್ಲ. ಆದರೂ ಅವನು ಆ ಹೆಸರನ್ನೇ ದಿನ- ರಾತ್ರಿ ಭಕ್ತಿಯಿಂದ ಸ್ಮರಿಸುತ್ತಿದ್ದಾನೆ. ಅವನು ಅತ್ಯಂತ ಭಕ್ತಿಯಿಂದ ಹೇಳುತ್ತಿರುವ ವಿಚಿತ್ರ ಹೆಸರು ಕೇಳಿ ನನಗೆ ನಗು ಬಂದಿತು ಎಂದನು.
ಇದನ್ನು ಕೇಳಿದ ಲಕ್ಷ್ಮಿಯು, ಸರಿ ಹಾಗಾದರೆ ನಾವೇ ಭೂಲೋಕಕ್ಕೆ ಹೋಗಿ ಅವನ ಭಕ್ತಿಯನ್ನು ಪರೀಕ್ಷೆ ಮಾಡೋಣ ಎಂದಳು. ಮಹಾವಿಷ್ಣು ಆಯ್ತು ನಿನ್ನಿಷ್ಟ ಎಂದನು. ಲಕ್ಷ್ಮಿ ಮತ್ತು ಮಹಾವಿಷ್ಣು ಭೂಲೋಕಕ್ಕೆ ಬಂದು, ಸಾಮಾನ್ಯ ಬ್ರಾಹ್ಮಣ ಮತ್ತು ಬ್ರಾಹ್ಮಣನ ಪತ್ನಿಯಂತೆ ವೇಶ ಬದಲಿಸಿಕೊಂಡು ಯಂಕನ ಜಮೀನಿನ ಬಳಿ ಬಂದರು. ವಿಷ್ಣು ಲಕ್ಷ್ಮಿಗೆ ಹೇಳಿದ, ನನ್ನ ಭಕ್ತನ ಮೇಲೆ ನನಗೆ ನಂಬಿಕೆ ಇದೆ. ನೀನು ಅವನನ್ನು ಪರೀಕ್ಷೀಸಲು ಬಂದವಳು ಪರೀಕ್ಷೆ ಮಾಡು ನಾನು ಸ್ವಲ್ಪ ಹೊತ್ತು ಅಡಗಿರುತ್ತೇನೆ ಎಂದು ಒಂದು ಹೊಂಡವನ್ನು ಸೃಷ್ಟಿಸಿ ಅದರಲ್ಲಿ ಅಡಗಿ ಕುಳಿತನು. ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ಯಂಕನ ಬಳಿ ಲಕ್ಷ್ಮಿ ಬಂದಳು. ಘಮೋಚನ್, ಘಮೋಚನ್, ಎಂದು ಹೇಳಿಕೊಳ್ಳುತ್ತಾ ಹೊಲದ ಕೆಲಸ ಮಾಡುತ್ತಿದ್ದನು. ಲಕ್ಷ್ಮಿ ಹತ್ತಿರ ಬಂದು ನೀನು ಏನು ಸ್ಮರಣೆ ಮಾಡುತ್ತಿರುವೆ ಎಂದು ಕೇಳಿದಳು. ಆದರೆ ಯಂಕ ಮಾತನಾಡಲಿಲ್ಲ ತನ್ನ ಪಾಡಿಗೆ ತಾನು ಘಮೋಚನ್, ಘಮೋಚನ್ ಎಂದು ಕೆಲಸ ಮಾಡುತ್ತಲೇ ಇದ್ದ. ಏಕೆಂದರೆ ಅಷ್ಟು ಹೊತ್ತು ದೇವರ ಹೆಸರು ಹೇಳುವುದನ್ನು ನಿಲ್ಲಿಸಿದರೆ, ಸ್ಮರಣೆ ಮಾಡುವುದು ಕಡಿಮೆಯಾಗುತ್ತದೆ ಎಂಬುದು ಅವನ ಮನಸ್ಸಿನಲ್ಲಿತ್ತು. ಲಕ್ಷ್ಮಿಯು ಮೊಂಡತನ ಬಿಡದೆ, ಹಟಕ್ಕೆ ಬಿದ್ದು, ನೀನು ಯಾರ ಹೆಸರು ಸ್ಮರಣೆ ಮಾಡುತ್ತಿರುವೆ ಎಂದು ಎರಡು ಮೂರು ಸಲ ಕೇಳಿದಳು.
ಲಕ್ಷ್ಮಿಯ ಮೊಂಡತನ ನೋಡಿ ಅವನಿಗೂ ಸಿಟ್ಟು ಬಂತು. ಅವಳತ್ತ ತಿರುಗಿ, ಏನು ಆಗಿನಿಂದ ಇಲ್ಲೇ ನಿಂತು ತೊಂದರೆ ಕೊಡುತ್ತಿರುವೆಯಲ್ಲ, ನಾನು ನನ್ನ ಪಾಡಿಗೆ ದೇವರ ಹೆಸರು ಹೇಳುತ್ತಿದ್ದೇನೆ. ಇಲ್ಲಿಂದ ಬೇಗ ಹೋಗು ಎಂದನು. ಲಕ್ಷ್ಮಿ ಮತ್ತೂ ಮೊಂಡುತನದಿಂದ, ನೀನು ಯಾರ ಹೆಸರು ಹೇಳುತ್ತಿರುವೆ ಎಂದು ಹೇಳಿದ ಹೊರತು ನಾನು ಇಲ್ಲಿಂದ ಹೋಗುವುದಿಲ್ಲ ಎಂದಳು. ಹಾಗಾದರೆ ಹೇಳುತ್ತೇನೆ ಕೇಳು ಎಂದು ಸಿಟ್ಟಿನಿಂದ, ನಿನ್ನ ಗಂಡನ ಹೆಸರನ್ನೇ ಹೇಳುತ್ತಿದ್ದೇನೆ ಎಂದನು. ಲಕ್ಷ್ಮಿಗೆ ಅವನು ಹೇಳಿದ್ದು ಬೇಗ ಅರ್ಥ ಆಗಲಿಲ್ಲ. ಏನು ಹೇಳಿದೆ ನನ್ನ ಗಂಡನಾ, ನನ್ನ ಗಂಡ ಯಾರು ಅವನೆಲ್ಲಿ ಇದ್ದಾನೆ ಎಂದು ಕೇಳಿದಳು. ಯಂಕನಿಗೆ ಮತ್ತಷ್ಟು ಸಿಟ್ಟು ಬಂದು, ನಿನ್ನ ಗಂಡ ಎಲ್ಲಿರುತ್ತಾನೆ ಅಂತ ನನಗೇನು ಗೊತ್ತು. ಇಲ್ಲೇ ಎಲ್ಲಾದರೂ ಹೊಂಡದಲ್ಲಿ ಅಡಗಿರುತ್ತಾನೆ ನೀನೇ ಹೋಗಿ ಹುಡುಕು ಎಂದು ಕೋಪದಿಂದ ಹೇಳಿ ತನ್ನ ಕೆಲಸದಲ್ಲಿ ತೊಡಗಿದನು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಇದನ್ನೆಲ್ಲ ಕೇಳುತ್ತಾ ಹೊಂಡದಲ್ಲಿ ಅಡಗಿ ಕುಳಿತಿದ್ದ “ಶ್ರೀಹರಿ”, ತಡ ಮಾಡದೆ ಮೇಲೆದ್ದು ಬಂದು ದಡ್ಡ ಯಂಕನ ಮುಂದೆ ನಿಂತನು. ಭಕ್ತ ನನ್ನ ಪರಮ ಭಕ್ತ ಶ್ರೇಷ್ಠನೇ ಕೇಳು, ನಾನು ನಿನ್ನ ಮುಗ್ಧ ಭಕ್ತಿಗೆ ಮೆಚ್ಚಿದ್ದೇನೆ. ನಾಮದಲ್ಲಿ ಏನು ಇಲ್ಲ. ನೀನು ಸ್ಮರಣೆ ಮಾಡುವ ಹೆಸರೇ ಶ್ರೇಷ್ಠವಾದದ್ದು. ನೀನು ತನು ಮನ- ಶುದ್ಧನಾಗಿ, ನನ್ನನ್ನೇ ಸ್ಮರಿಸುತ್ತಿರುವೆ. ನಿನಗಿಂತ ದೊಡ್ಡ ಭಕ್ತ ಯಾರು ಇಲ್ಲ ನನ್ನ ನಿಜವಾದ ಪ್ರೀತಿಯ ಭಕ್ತ ಎಂದರೆ ನೀನೆ, ಇದೋ ನೋಡು ಎಂದು ವಿಷ್ಣು ಮತ್ತು ಲಕ್ಷ್ಮಿ, ತಮ್ಮ ನಿಜರೂಪದಲ್ಲಿ ಅವನಿಗೆ ದರ್ಶನ ಕೊಟ್ಟರು. ದಡ್ಡ ಯಂಕನಿಗೆ ಆಗ ಅವರು ದೇವರೆಂದು ತಿಳಿಯಿತು. ಕಣ್ತುಂಬಿದ ಯಂಕನ ಕಣ್ಣುಗಳಿಂದ ದಳ ದಳ ನೀರು ಇಳಿಯುತ್ತಿತ್ತು. ನಿಂತಲ್ಲಿಯೇ ವೈಕುಂಠಪತಿ ನಾರಾಯಣ- ಮಹಾಲಕ್ಷ್ಮಿ ಗೆ ಪಾದಗಳಿಗೆ ನಮಸ್ಕರಿಸಿದನು. ಪ್ರೀತಿಯಿಂದ ಮೇಲೆತ್ತಿದ ಮಹಾ ವಿಷ್ಣು, ನಿನಗೆ ಏನು ವರಬೇಕು ಎಂದು ಕೇಳಿದನು. ದಡ್ಡ ಯಂಕ ಹೇಳಿದ. ಲೋಕದ ತಂದೆ ತಾಯಿಗಳಾದ ನೀವು ದರ್ಶನ ಭಾಗ್ಯದ ಕೊಟ್ಟಿದ್ದೀರಿ. ನನಗೇನು ಬೇಕೋ ಎಲ್ಲವನ್ನು ಕರುಣಿಸಿರುವೆ. ನನಗೆ ಇನ್ನೇನು ಬೇಡ ಎಂದನು. ಮಹಾ ವಿಷ್ಣು ಅವನನ್ನು ಪ್ರೀತಿಯಿಂದ ಆಲಂಗಿಸಿಕೊಂಡು ಆಶೀರ್ವದಿಸಿ, ಸಕಲ ಸೌಭಾಗ್ಯ ಸಂಪತ್ತು, ಶ್ರದ್ದಾ, ಭಕ್ತಿ, ಜ್ಞಾನವನ್ನು ದಯಪಾಲಿಸಿ ಅನಂತಕಾಲ ಸುಖವಾಗಿ ಬಾಳುವಂತೆ ಅನುಗ್ರಹಿಸಿ, ಮಹಾವಿಷ್ಣು- ಮಹಾಲಕ್ಷ್ಮಿ ಅಂತರ್ಧಾನರಾದರು.
ಕಾಯೇನ ವಾಚ ಮನಸ್ಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇ ಸ್ವಭಾವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೇ
ನಾರಾಯಣಾಯೇತಿ ಸಮರ್ಪಯಾಮಿ!!
ಮನೋವಾಕ್ಕಾಯಗಳಿಂದಾಗಲಿ, ಇಂದ್ರಿಯ ಬುದ್ಧಿಗಳಿಂದಾಗಲಿ ಅಥವಾ ಸ್ವಾಭಾವಿಕವಾಗಿಯಾಗಲೀ, ಮಾಡಿರುವುದೆಲ್ಲವನ್ನು ಪರಮಾತ್ಮನಾದ ನಾರಾಯಣನಿಗಾಗಿ ಎಂದು ಭಾವಿಸಿ ಆತನಿಗೆ ಅವೆಲ್ಲವನ್ನು ಅರ್ಪಿಸುತ್ತೇನೆ.








