ಬೆಂಗಳೂರು : ರಾಜ್ಯ ಸರ್ಕಾರದ ಯೋಜನೆಗಳು ರಾಜ್ಯದ ಇನ್ನೂ ಕೆಲವಷ್ಟು ಜನರಿಗೆ ತಲುಪಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಇಷ್ಟೆಲ್ಲಾ ಯೋಜನೆಗಳಿದ್ದರೂ ಸಹ ಈವರೆಗೆ ಕೆಲವರಿಗೆ ಅವು ತಲುಪಿಲ್ಲ.ನನ್ನ ಬಳಿ ಅದರ ಅಂಕಿಅಂಶ ಇದೆ. ಈಗಲೂ ರಾಜ್ಯದಲ್ಲಿ ಕೆಲವರಿಗೆ ಯೋಜನೆ ತಲುಪಿಲ್ಲ. ಇದಕ್ಕೆ ಯಾರು ಜವಾವ್ದಾರರು?. ವಿಕೇಂದ್ರೀಕರಣ ವ್ಯವಸ್ಥೆ, ಆಡಳಿತ ಯಂತ್ರ, ಸಂಘ ಸಂಸ್ಥೆಗಳು ಇದರ ಹೊಣೆ ಹೊರಬೇಕು ಎಂದು ಅವರು ತಿಳಿಸಿದರು.
ಕಳೆದ 75 ವರ್ಷದಿಂದ ಗ್ರಾಮೀಣಾಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಹಾಕಿದ್ದೇವೆ. ಅದನ್ನು ಲೆಕ್ಕಹಾಕಿದರೆ ಪ್ರತಿಯೊಬ್ಬನಿಗೆ ಸುಮಾರು 1 ಲಕ್ಷ ರೂ. ಬಂದಂತಾಗಿದೆ. ಆದರೆ ತಳಮಟ್ಟದಲ್ಲಿ ಅದರ ಫಲಿತಾಂಶ ಕಾಣಿಸುತ್ತಿಲ್ಲ. ಬಿಪಿಎಲ್ ಸಂಖ್ಯೆ ಹೇಳಲು ನಾಚಿಕೆ ಆಗುತ್ತದೆ. ಅದನ್ನು ಪರಿಷ್ಕರಣೆ ಮಾಡಲು ಸಾಧ್ಯವಾಗಿಲ್ಲ. ಅವರು ವಾಸ್ತವವಾಗಿ ಬಿಪಿಎಲ್ ಇದ್ದಾರಾ?. ಅದನ್ನು ಟಚ್ ಮಾಡಿದರೆ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಯೋಜನೆಗಳು, ಆಯವ್ಯಯ ಹಣ ಸರಿಯಾಗಿ ಸಮೀಕರಣ ಆಗುತ್ತಿಲ್ಲ.ಎಲ್ಲಾ ಕಡೆ ಜಿಲ್ಲಾ ಯೋಜನಾ ಸಮಿತಿ ರಚನೆಯಾಗಿದೆ. ಸಿಎಂ ಪತ್ರ ಬರೆದು ಈ ತಿಂಗಳೊಳಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಯೋಜನಾ ಸಮಿತಿ ಸಭೆ ನಡೆಸುವಂತೆ ಸೂಚಿಸಿದ್ದಾರೆ. ಆ ಮೂಲಕ ಬಜೆಟ್ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.








