ನವದೆಹಲಿ: ಕೇಂದ್ರ ಸರ್ಕಾರವು 500 ರೂಪಾಯಿ ನೋಟುಗಳನ್ನು ನಿಷೇಧಿಸಲು ಯೋಜಿಸುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳನ್ನು ಇದೊಂದು ನಕಲಿ ಸುದ್ದಿಯಾಗಿದೆ. ಇಂತಹ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಪಿಐಬಿ ಫ್ಯಾಕ್ಟ್ ಚೆಕ್, ಭಾರತ ಸರ್ಕಾರವು ₹500 ರೂಪಾಯಿ ನೋಟುಗಳನ್ನು ನಿಷೇಧಿಸಲು ಯೋಜಿಸುತ್ತಿದೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒಂದು ಹೇಳಿಕೆಯನ್ನು ಮಾಡಲಾಗುತ್ತಿದೆ. ಇದು ಸುಳ್ಳು, ಯಾರು ನಂಬಬೇಡಿ. ಇದೊಂದು ನಕಲಿ ಸುದ್ದಿ ಎಂಬುದಾಗಿ ತಿಳಿಸಿದೆ.
A claim is being made in a social media post that the Government of India plans to ban ₹500 notes.#PIBFactCheck
❌ This claim is #FAKE
✅ No such announcement has been made by the Central Government.
🔎 For authentic information related to financial policies and decisions,… pic.twitter.com/kOvEZ3BjVH
— PIB Fact Check (@PIBFactCheck) January 18, 2026
ಪಿಐಬಿ ಕೇಂದ್ರ ಸರ್ಕಾರವು ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ. ತಪ್ಪುದಾರಿಗೆಳೆಯುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಫ್ಯಾಕ್ಟ್ ಚೆಕ್ ಘಟಕವು ಹಂಚಿಕೊಂಡಿದೆ. ಸರ್ಕಾರಿ ನೀತಿಗಳು ಮತ್ತು ನಿರ್ಧಾರಗಳ ಕುರಿತು ನಿಖರವಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ನಂಬುವಂತೆ ಸಾರ್ವಜನಿಕರನ್ನು PIB ಒತ್ತಾಯಿಸಿದೆ.
ಹಣಕಾಸು ನೀತಿಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ, ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಿ ಎಂದು PIB ಫ್ಯಾಕ್ಟ್ ಚೆಕ್ ತನ್ನ X ಪೋಸ್ಟ್‌ನಲ್ಲಿ ತಿಳಿಸಿದೆ.
ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುವ ಸುಳ್ಳು ಮಾಹಿತಿಯನ್ನು ನಿಯಮಿತವಾಗಿ ಪತ್ತೆ ಮಾಡುತ್ತದೆ.
ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಕಡಿಮೆಗೆ ಬ್ರಿಕ್ಸ್ ಡಿಜಿಟಲ್ ಕರೆನ್ಸಿ ಲಿಂಕ್ ಮಾಡಲು ಆರ್‌ಬಿಐ ಪ್ರಸ್ತಾಪ: ವರದಿ








